»   » ಕನ್ನಡಕ್ಕೆ ಅಪ್ರತಿಮ ಸುಂದರಿ ಕ್ಲಾಡಿಯಾ ಸೀಸ್ಲ

ಕನ್ನಡಕ್ಕೆ ಅಪ್ರತಿಮ ಸುಂದರಿ ಕ್ಲಾಡಿಯಾ ಸೀಸ್ಲ

Posted By:
Subscribe to Filmibeat Kannada

ಅಪ್ರತಿಮ ಸುಂದರಿ, ಜರ್ಮನಿ ರೂಪದರ್ಶಿ ಮತ್ತು ಪೋಲಂಡ್ ಭಾಷೆಯ ಗಾಯಕಿ ಕ್ಲಾಡಿಯಾ ಸೀಸ್ಲ ಕನ್ನಡಕ್ಕೆ ಬರುತ್ತಿದ್ದಾರೆ. ಆಕೆ ನಟಿಸಲಿರುವ ಚಿತ್ರದ ಹೆಸರು 'ಪ್ರೈವೇಟ್ ನಂಬರ್'. ಮೇ.16ರ ಅಕ್ಷಯ ತೃತೀಯದಂದು ಚಿತ್ರ ಬೆಂಗಳೂರಿನಲ್ಲಿ ಸೆಟ್ಟೇರಲಿದೆ. ಸದಾ ಬಿಕಿನಿಯಲ್ಲಿ ಬಳುಕುವ ಈ ಸುಂದರಿ ಇತ್ತೀಚೆಗೆ ಭಾರತೀಯ ಸೀರೆ, ಒಡವೆಗಳನ್ನು ತೊಟ್ಟು ಕಂಗೊಳಿಸಿದ್ದೂ ಉಂಟು.

ಕೆ ಗಣೇಶ್ ಶೆಟ್ಟಿ ಅವರು ಎಂ ಕೆ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಂಬೈ ಮೂಲದ ಆನಂದ್ ಕುಮಾರ್ ಚಿತ್ರದ ನಿರ್ದೇಶಕರು. ಹೊಸಬ ಪ್ರೀತಂ ಚಿತ್ರದ ನಾಯಕ ನಟ. ಮಾಜಿ ಮಿಸ್ ಇಂಡಿಯಾ ನೀಹಾರಿಕಾ ಸಿಂಗ್ ಚಿತ್ರದ ನಾಯಕಿ. ಕ್ಲಾಡಿಯಾ ಸೀಸ್ಲ ಅವರದು ಹಾಗೆ ಬಂದು ಹೀಗೆ ಹೋಗುವ ಅತಿಥಿ ಪಾತ್ರ.

ತಮ್ಮ ಹದಿನೈದನೇ ವಯಸ್ಸಿಗೇ ಕ್ಲಾಡಿಯಾ ರೂಪದರ್ಶಿಯಾಗಿದ್ದರು. ಬಿಕಿನಿ ತೊಟ್ಟು ಹಲವಾರು ಫ್ಯಾಷನ್ ಶೋಗಳಲ್ಲಿ ಬೆಕ್ಕಿನ ಹೆಜ್ಜೆ ಹಾಕಿದ ಅನುಭವಿದೆ. 'ಬೀಚ್ ಹೌಸ್' ಆಕೆ ಅಭಿನಯಿಸಿದ ಮೊದಲ ಚಿತ್ರ. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'(ಸೀಸನ್ 3)ನಲ್ಲಿ ಕಾಣಿಸಿಕೊಂಡ ಬಳಿಕ ಆಕೆ ಮತ್ತಷ್ಟು ಜನಪ್ರಿಯರಾದರು.

ಬಾಲಿವುಡ್ ನ 'ಕರ್ಮ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಕೆಯ ತಂದೆ ಪೋಲೆಂಡ್ ನವರಾದರೆ ತಾಯಿ ಜರ್ಮನಿಯವರು. ಒಂದು ರೀತಿಯಲ್ಲಿ ಇವರ ಕುಟುಂಬ ಆಸ್ಟ್ರೇಲಿಯಾ, ಹಂಗೇರಿ ಮತ್ತು ಜೆಕ್ ದೇಶಗಳ ಸಮ್ಮಿಲದಂತೆ. ಈಕೆಗೆ ಇಬ್ಬರು ಸಹೋದರಿಯರಿದ್ದಾರೆ. ಒಟ್ಟಿನಲ್ಲಿ ಅಕ್ಷಯ ತೃತೀಯದಂದು ಈಕೆ ಕನ್ನಡಕ್ಕೆ ಮಹಾಲಕ್ಷ್ಮಿಯಂತೆ ಅಡಿಯಿಡುತ್ತಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada