»   » ವೇಶ್ಯಾವಾಟಿಕೆ ನಡೆಸುತ್ತಿದ್ದ ಜೂ.ಆರ್ಟಿಸ್ಟ್ ಬಂಧನ

ವೇಶ್ಯಾವಾಟಿಕೆ ನಡೆಸುತ್ತಿದ್ದ ಜೂ.ಆರ್ಟಿಸ್ಟ್ ಬಂಧನ

Posted By:
Subscribe to Filmibeat Kannada

ಸಿನಿಮಾ ತಾರೆಗಳು ವೇಶ್ಯಾ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವ ಘಟನೆಗಳು ಪದೇ ಪದೇ ಮರುಕಳಿಸುತ್ತಲೇ ಇವೆ. ಇದೇ ರೀತಿಯ ಮತ್ತೊಂದು ಘಟನೆಯೊಂದು ಹೈದರಾಬಾದಿನಲ್ಲಿ ಬೆಳಕಿಗೆ ಬಂದಿದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಜೂನಿಯರ್ ಆರ್ಟಿಸ್ಟ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಹಿಡಿತದಲ್ಲಿದ್ದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಹೈದರಾಬಾದಿನ ಡಿಜಿಪಿ ರಾಮಚಂದರ್ ನೀಡಿದ ವಿವರಗಳು ಹೀಗಿವೆ. ಎಂ ಸುಜಾತಾ ಎಂಬ ರಾಜಮಂಡ್ರಿ ಮೂಲದ ನಟಿ ಹೈದರಾಬಾದಿನಲ್ಲಿ ವಾಸಿಸುತ್ತಿದ್ದು ಈಕೆ ಜೂನಿಯರ್ ಆರ್ಟಿಸ್ಟ್ ಆಗಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು.

ಹದಿನೇಳು ವರ್ಷಗಳ ಹಿಂದೆಯೇ ಆಕೆಗೆ ಮದುವೆಯಾಗಿದೆ. ಐದು ವರ್ಷಗಳ ಹಿಂದೆ ಆಕೆಯ ಪತಿ ತೀರಿಕೊಂಡಿದ್ದಾರೆ. ಅನಾರೋಗ್ಯದ ಕಾರಣ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಲು ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಆಕೆ ಮತ್ತೊಂದು ವೃತ್ತಿ ಕಂಡುಕೊಂಡಿದ್ದಳು.

ಸುಲಭವಾಗಿ ದುಡ್ಡು ಸಂಪಾದಿಸಲು ಆಕೆ ಕಂಡುಕೊಂಡ ದಾರಿ ವೇಶ್ಯಾವಾಟಿಕೆ ನಡೆಸುವುದು. ಸ್ಥಳೀಯ ಯುವತಿಯರಿಗೆ ಬಲೆಬೀಸಿ ಅವರನ್ನು ನಂಬಿಸಿ ವೇಶ್ಯಾವೃತ್ತಿಗೆ ತಳ್ಳುತ್ತಿದ್ದಳು. ಗಿರಾಕಿಗಳನ್ನು ಆಹ್ವಾನಿಸಿ ಅವರಿಂದ ಕಮೀಷನ್ ವಸೂಲಿ ಮಾಡುತ್ತಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)

English summary
Small-time Telugu junior actist M Sujatha was arrested in a prostitution case in Hyderabad. A case has been registered against her at North Zone police station.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X