»   » ಪಟಾಯ್ಸು; ಧಮ್ಮಿದ್ರೆ ನಿಭಾಯ್ಸು ಅಂತಿದಾರೆ ರಘು

ಪಟಾಯ್ಸು; ಧಮ್ಮಿದ್ರೆ ನಿಭಾಯ್ಸು ಅಂತಿದಾರೆ ರಘು

Posted By: * ಶ್ರೀರಾಮ್ ಭಟ್
Subscribe to Filmibeat Kannada
ಶ್ರೀ ಶಿರಡಿ ಸಾಯಿ ಸಿನಿವಿಷನ್ಸ್' ಬ್ಯಾನರ್ ಅಡಿಯಲ್ಲಿ, ಎಸ್ ರಾಘವೇಂದ್ರ ನಿರ್ಮಿಸುತ್ತಿರುವ 'ಪಟಾಯ್ಸು' ಚಿತ್ರದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ಭರದಿಂದ ನಡೆಯುತ್ತಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ 'ಧಮ್ಮಿದ್ರೆ ನಿಭಾಯ್ಸು' ಎಂಬ ಅಡಿಬರಹವಿದೆ. ಈ ಚಿತ್ರದ ಚಿತ್ರೀಕರಣ ಶೇ. 30ರಷ್ಟು ಮುಗಿದ್ದಿದ್ದು, ಸದ್ಯವೇ ಚಿತ್ರತಂಡ ಮೈಸೂರಿಗೆ ಪ್ರಯಾಣ ಬೆಳೆಸಲಿದೆ.

ನಾಯಕ ರಘು ಹಾಗೂ ನಾಯಕಿ ಐಶ್ವರ್ಯಾ ನಾಗ್ ಜೋಡಿಯ ಈ ಚಿತ್ರದಲ್ಲಿ 'ಚಿಂಗಾರಿ' ಚಿತ್ರದಲ್ಲಿ 'ವಿಲನ್' ಪಾತ್ರದ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಪಡೆದು ಎಲ್ಲರ ಗಮನಸೆಳೆದಿರುವ ನವನಟ 'ಮಧು ಗುರುಸ್ವಾಮಿ' ಪೂರ್ಣ ಪ್ರಮಾಣದ ಖಳನಟರಾಗಿ ಅಭಿನಯಿಸುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣದಲ್ಲಿ ಚಿತ್ರ ತುಂಬಾ ಶ್ರೀಮಂತವಾಗಿ ಮೂಡಿಬಂದಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.

ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರಗಳ ಸಂಗೀತ ನಿರ್ದೇಶಕ ವಿ ಶ್ರೀಧರ್, ಪಟಾಯ್ಸು ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಜೋನಿ ಹರ್ಷ ಸಂಕಲನ ಹಾಗೂ ರವಿವರ್ಮ ಸಾಹಸ ಚಿತ್ರಕ್ಕಿದೆ. ಮೋಹನ್ ಬಿ ಕೆರೆ ಕಲಾ ನಿರ್ದೇಶನ ಮಾಡಲಿದ್ದಾರೆ.

ರಘು, ಐಶ್ವರ್ಯ ನಾಗ್ ಹಾಗೂ ಮಧು ತಾರಾಗಣದ ಇದರಲ್ಲಿ ನಟಿ ಶ್ರುತಿ ಹಾಗೂ ಗಿರೀಶ್ ಕಾರ್ನಾಡ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಶರಣ್, ಸಾಧುಕೋಕಿಲ, ಪ್ರವೀಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಳೆದ ವರ್ಷ ಸೆಪ್ಟಂಬರ್ 2ರಂದು ಮುಹೂರ್ತ ಆಚರಿಸಿಕೊಂಡಿರುವ ಪಟಾಯ್ಸು ಚಿತ್ರ ಈ ವರ್ಷ, 2012ರ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ತೆರೆಕಾಣಲಿದೆ.

English summary
Kannada Movie Pataysu shooting is in progress. Raghu and Aishwarya Nag Pair is in lead role. Chingari movie fame Madhu, is in lead villain role. Nandakishore is directing this movie. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X