For Quick Alerts
  ALLOW NOTIFICATIONS  
  For Daily Alerts

  ಆನ್‌ಲೈನ್‌ನಲ್ಲಿ ಬಾಗಿಲು ತೆರೆದ ಪುನೀತ್ ಹುಡುಗರು

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಮುಖ್ಯಭೂಮಿಕೆಯಲ್ಲಿರುವ 'ಹುಡುಗರು' ವೆಬ್ ಸೈಟ್ ಇತ್ತ್ತೀಚೆಗೆ ಆನ್‌ಲೈನ್‌ನಲ್ಲಿ ಬಾಗಿಲು ತೆರೆಯಿತು. ಈ ವೆಬ್ ಸೈಟಿನಲ್ಲಿ ಚಿತ್ರದ ಸ್ಟಿಲ್ಸ್ ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ [http://hudugru.chitraloka.com/]. ಚಕ್ರೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸುತ್ತಿರುವ ಚಿತ್ರವಿದು.

  ಏಪ್ರಿಲ್ 18ರಂದು ಹುಡುಗರು ಧ್ವನಿಸುರುಳಿ ಮತ್ತು ಧ್ವನಿಮುದ್ರಿಕೆಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಆನಂದ್ ಆಡಿಯೋ ಕಂಪನಿ ಈ ಹುಡುಗರು ಧ್ವನಿಸುರುಳಿಯನ್ನು ಹೊರತರುತ್ತಿರುವುದಾಗಿ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ. ಮೇ ಮೊದಲ ವಾರದಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ರಾಘವೇಂದ್ರ ವಿವರ ನೀಡಿದ್ದಾರೆ.

  ತಾರಾಗಣದಲ್ಲಿ ಪುನೀತ್ ರಾಜ್‌ಕುಮಾರ್, ರಾಧಿಕಾ ಪಂಡಿತ್, ಯೋಗೀಶ್, ಶ್ರೀನಗರ ಕಿಟ್ಟಿ, ವಿಶಾಲಹೆಗ್ಡೆ, ಅಭಿನಯಾ (ನಾಡೋಡಿಗಳ್ ಖ್ಯಾತಿ) ರಮ್ಯಾ ಬಾರ್ನೆ, ಶಾಂತಮ್ಮ, ರಂಗಾಯಣ ರಘು, ಸುಧಾ ಬೆಳವಾಡಿ, ಶ್ರೀಕಾಂತ್ ಹೊನ್ನಾವಳ್ಳಿ, ಶ್ರೀನಿವಾಸಪ್ರಭು, ವನಿತಾವಾಸು, ಆಶಾರಾಣಿ, ಕೃಷ್ಣ ಅಡಿಗಾ, ಮುಂತಾದವರಿದ್ದಾರೆ.

  English summary
  Puneet Raj Kumar ,Radhika Pandit, Srinagara Kitty and Yogesh lead film Hudugaru website launched in Bangalore. The audio of the film to be released April 18 Raghavendra Raj Kumar in the press meet organized during the launch of the films website.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X