»   »  ಉಪೇಂದ್ರಲಂಡನ್ ಗೌಡನ ಹೊಸ ಸಮಾಚಾರ!

ಉಪೇಂದ್ರಲಂಡನ್ ಗೌಡನ ಹೊಸ ಸಮಾಚಾರ!

Posted By:
Subscribe to Filmibeat Kannada
Real star Upendra
'ಲಂಡನ್ ಗೌಡ' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವುದು ಗೊತ್ತೇ ಇದೆ. ಮಂಡ್ಯದ ಸಾಮಾನ್ಯ ವ್ಯಕ್ತಿಯೊಬ್ಬ ಲಂಡನ್ ನಲ್ಲಿ ದೊಡ್ಡ ಸಾಧನೆ ಮಾಡುವುದೇ ಚಿತ್ರದ ಕಥಾ ಹಂದರ. ಈ ಚಿತ್ರವನ್ನು ಎನ್ ಆರ್ ಶೆಟ್ಟಿ ನಿರ್ಮಿಸುತ್ತಿದ್ದು ಇತ್ತೀಚೆಗೆ ಬೆಂಗಳೂರಿನಲ್ಲಿ ಸೆಟ್ಟೇರಿದೆ. ಮುಹೂರ್ತ ಸನ್ನಿವೇಶದಲ್ಲಿ ಕುಟುಂಬ ಸದಸ್ಯರೊಂದಿಗೆ ಉಪೇಂದ್ರ ಭಾಗವಹಿಸಿದ್ದರು.

ಇದೇ ಮೊದಲ ಬಾರಿಗೆ ಯತೀಶ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕತೆ, ಚಿತ್ರಕತೆ ಉಪೇಂದ್ರ ಅವರದು. ಕರ್ನಾಟಕ ಮೂಲದ ಸ್ನೇಹಾ ಉಲ್ಲಾಳ್ ಚಿತ್ರದ ನಾಯಕಿ. ಲಂಡನ್ ಗೌಡನಿಗೆ ಕ್ಯಾಮೆರಾ ಹಿಡಿಯುತ್ತಿರುವುದು ಸಂತೋಷ್ ಪತಾಜೆ. ಅವರ ಛಾಯಾಗ್ರಹಣದ ಇತ್ತೀಚೆಗಿನ 'ಜೋಶ್' ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಲಂಡನ್ ಗೌಡ ಚಿತ್ರದ ಮುಖ್ಯ ದೃಶ್ಯಗಳನ್ನು ಲಂಡನಲ್ಲಿ ಚಿತ್ರೀಕರಿಸಲಾಗುತ್ತದೆ. ಏತನ್ಮಧ್ಯೆ ಉಪೇಂದ್ರ ನಟಿಸಿರುವ ಮತ್ತೊಂದು ಚಿತ್ರ 'ದುಬೈ ಬಾಬು' ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಶೈಲೇಂದ್ರ ಬಾಬು ನಿರ್ಮಿಸಿದ್ದು ನಾಗಣ್ಣ ನಿರ್ದೇಶಿಸಿದ್ದಾರೆ. ಮೇ 22ರಂದು ದುಬೈ ಬಾಬು ಚಿತ್ರ ಕರ್ನಾಟಕದಾದ್ಯಂತ ತೆರೆ ಕಾಣಲಿದೆ. ಮೇ 22ರಿಂದ ಚಿತ್ರ ಪ್ರದರ್ಶನ ವೇಳೆಯೂ ಬದಲಾಗಲಿದೆ ಎಂದು ಈಗಾಗಲೇ ವಾಣಿಜ್ಯ ಮಂಡಳಿ ತಿಳಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

'ಲಂಡನ್ ಗೌಡ'ನಿಗೆ ಜತೆಯಾದ ವಿ ಮನೋಹರ್
ಲಂಡನ್ ಗೌಡನಿಗೆ ಜತೆಯಾದ ಉಲ್ಲಾಳದ ಸ್ನೇಹ!
ಅಮೀರ್ ಖಾನ್ ನೆನಪಿಸುವ ಉಪೇಂದ್ರ: ಸೆಲೀನಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada