For Quick Alerts
  ALLOW NOTIFICATIONS  
  For Daily Alerts

  ಸಣಕಲ ದೇಹ ಹುರಿಗೊಳಿಸಿದ ರಿಯಲ್ ಸ್ಟಾರ್ ಉಪ್ಪಿ

  By Rajendra
  |

  ಇಷ್ಟು ದಿನ ತಮ್ಮ ಸಣಕಲು ದೇಹದಲ್ಲೇ ಮ್ಯಾಜಿಕ್ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ತಾನೆ ಸಿಕ್ಸ್ ಪ್ಯಾಕ್ ಕ್ಲಬ್ ಸೇರಿದ್ದಾರೆ. ಅವರ ಮುಂದಿನ ಚಿತ್ರ 'ಟೋಪಿವಾಲಾ'ಗಾಗಿ ತಮ್ಮ ದೇಹವನ್ನು ಹುರಿಗೊಳಿಸಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರು ಸತತ ಆರು ತಿಂಗಳ ಕಾಲ ಕಸರತ್ತು ಮಾಡಿ ದೇಹಕ್ಕೆ ಒಂದು ಶೇಫ್ ನೀಡಿದ್ದಾರೆ.

  ಇಷ್ಟೆಲ್ಲಾ ಕಷ್ಟಪಟ್ಟು ದೇಹವನ್ನು ಹುರಿಗೊಳಿಸಿದ್ದಾರೆ ಎಂದರೆ ಇದೊಂದು ಪಕ್ಕಾ ಆಕ್ಷನ್ ಫಿಲಂ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಚಿತ್ರದಲ್ಲಿ ಉಪ್ಪಿ ಪೊಲೀಸ್ ಪಾತ್ರದಲ್ಲಿ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು. ಚಿತ್ರದ ನಾಯಕಿ ಭಾವನಾ.

  'Simply Kailawesome' ಎಂಬ ವಿಭಿನ್ನ ಪ್ರಯೋಗಾತ್ಮಕ ಚಿತ್ರ ನಿರ್ದೆಶಿಸಿದ್ದ ಎಂಜಿ ಶ್ರೀನಿವಾಸ್ ಅವರು 'ಟೋಪಿವಾಲಾ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಂಗೀತ ವಿ ಹರಿಕೃಷ್ಣ ಅವರದು. ಈಗಾಗಲೆ ಕನ್ನಡದಲ್ಲಿ ದುನಿಯಾ ವಿಜಯ್, ಪುನೀತ್ ರಾಜ್‌ಕುಮಾರ್ ಹಾಗೂ ಆನಂದ್ ಸೇರಿದಂತೆ ಹಲವು ತಾರೆಗಳು ಸಿಕ್ಸ್‌ಪ್ಯಾಕ್ ತಾರೆಗಳಾಗಿ ಹೊರಹೊಮ್ಮಿರುವುದು ಗೊತ್ತೇ ಇದೆ. ಉಪ್ಪಿ ಹೊಸ ಸೇರ್ಪಡೆ ಅಷ್ಟೆ. (ಏಜೆನ್ಸೀಸ್)

  English summary
  Kannada actor Real Star Upendra joins six-pack abs club. The actor has toned up for his upcoming flick Topiwala. The film, directed by MG Srinivas — who had received positive reviews for his Simply Kailawesome.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X