»   »  ಗಣೇಶ್ ಚಿತ್ರದ ನಾಯಕಿಯಾಗಿ ಅಂಜನ ಸುಖಾನಿ!

ಗಣೇಶ್ ಚಿತ್ರದ ನಾಯಕಿಯಾಗಿ ಅಂಜನ ಸುಖಾನಿ!

Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಗೆ ಹೊಸ ನಾಯಕಿ ಸಿಕ್ಕಿದ್ದಾರೆ. ಹೆಸರು ಅಂಜನ ಸುಖಾನಿ. ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ 'ಮಳೆಯಲಿ ಜೊತೆಯಲಿ' ಚಿತ್ರದಲ್ಲಿ ಗಣೇಶ್ ಗೆ ಅಂಜನ ಸುಖಾನಿ ಸಾಥ್ ನೀಡಲಿದ್ದಾರೆ. ಬೆಳ್ಳಿತೆರೆಗೆ ಅಡಿಯಿಡುವುದಕ್ಕೂ ಮುನ್ನ ಅಂಜನ ಸುಖಾನಿ ರೂಪದರ್ಶಿಯಾಗಿದ್ದವರು.

ಗಣೇಶ್ ರ ಹೆಂಡತಿ ಶಿಲ್ಪಾ ಈ ಚಿತ್ರದ ನಿರ್ಮಾಪಕಿ. ಗಣೇಶ್ ರ ಹುಟ್ಟುಹಬ್ಬದ ದಿನ ಜುಲೈ 2ರಂದು 'ಮಳೆಯಲಿ ಜೊತೆಯಲಿ' ಚಿತ್ರ ಸೆಟ್ಟೇರಲಿದೆ. ಮಳೆಯಲಿ ಜೊತೆಯಲಿ ಚಿತ್ರದ ನಾಯಕಿ ಯಾರು ಎಂಬುದು ಬಹಳಷ್ಟು ಕುತೂಹಲ ಮೂಡಿಸಿತ್ತು. ಈಗ ಅಂಜನ ಆಯ್ಕೆಯ ಮೂಲಕ ಕುತೂಹಲಕ್ಕೆ ತೆರೆಬಿದ್ದಿದೆ.

ಈ ಚಿತ್ರಕ್ಕೆ ಹೊಸ ಮುಖವನ್ನು ಪರಿಚಯಿಸಬೇಕು ಎಂದು ಗಣೇಶ್ ಮತ್ತು ಪ್ರೀತಂ ಗುಬ್ಬಿ ಲೆಕ್ಕಾಚಾರ ಹಾಕಿದ್ದರು. ಹಾಗಾಗಿ ಚೆನ್ನೈ ಮತ್ತು ಮುಂಬೈ ನಗರಗಳಲ್ಲಿ ಹೊಸ ಮುಖಕ್ಕಾಗಿ ಹುಡುಕಾಟ ಆರಂಭವಾಗಿತ್ತು. ಆಡಿಷನ್ ನಲ್ಲಿ ಬಹಳಷ್ಟು ಹುಡುಗಿಯರನ್ನು ನೋಡಿದ ಬಳಿಕ ಕಡೆಗೆ ಜೈಪುರ ಮೂಲದ ಅಂಜನರನ್ನು ಓಕೆ ಮಾಡಿದ್ದಾರೆ.

ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಅಂಜನ ಈಗಾಗಲೇ ನಟಿಸಿದ್ದಾರೆ. 'ನಾ ತುಂ ಜಾನೊ ನಾ ಹಮ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ನಂತರ ಸಲಾಮ್ ಇ ಇಷ್ಕ್, ಜೈ ವೀರು, ಅಲ್ಲಾ ಕೆ ಬಾಂದೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಳೆಯಲಿ ಜೊತೆಯಲಿ ಚಿತ್ರ ಅಂಜನ ನಟಿಸಲಿರುವ ಮೊದಲ ದಕ್ಷಿಣ ಭಾರತದ ಚಿತ್ರವಾಗಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada