»   » ಎಚ್ ಡಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಪ್ರತಿಕ್ಷಣ

ಎಚ್ ಡಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಪ್ರತಿಕ್ಷಣ

Posted By:
Subscribe to Filmibeat Kannada

ಧನುಷ್ ನಿರ್ದೇಶನದ 'ಪ್ರತಿಕ್ಷಣ' ಚಿತ್ರಕ್ಕೆ ಸ್ಲೈಲೈನ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ಮುಕ್ತಾಯವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, ಒಂದು ದಿನದ ಚಿತ್ರೀಕರಣ ಮಾತ್ರ ಬಾಕಿಯಿದೆ ಎನ್ನುತ್ತಾರೆ ಧನುಷ್

ಪ್ರೇಮಪ್ರಧಾನ ಈ ಚಿತ್ರದ ನಾಯಕ ಪ್ರೀತಮ್. ಸಂಗೀತಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಬ್ಯಾಂಕ್‌ಜನಾರ್ದನ್, ಟೆನ್ನಿಸ್‌ಕೃಷ್ಣ, ಚಿದಾನಂದ್, ಪ್ರತಾಪ್(ಕುರಿಗಳು), ಹರೀಶ್‌ರಾಯ್ ಮುಂತಾದವರಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಚೇತನ್ ಪ್ರೊಡಕ್ಷನ್ಸ್ ಮೂಲಕ ಟಿ.ಎನ್.ಹರೀಶ್‌ಕುಮಾರ್(ಧಣಿಸಂದ್ರ) ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿದ್ದಾರೆ. ಕರುಣೇಶ್ ಛಾಯಾಗ್ರಹಣ, ಇ.ಆರ್.ವಿನಯ್ ಸಂಗೀತ, ಗಂಗಾಧರ್, ಪರಮೇಶ್ ನೃತ್ಯ, ಅಲ್ಟಿಮೆಟ್ ಶಿವು ಸಾಹಸ ಹಾಗೂ ಭರತ್ ಅವರ ನಿರ್ಮಾಣ ನಿರ್ವಹಣೆ 'ಪ್ರತಿಕ್ಷಣ' ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada