Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ಮಾಪಕರ ಸಂಘಕ್ಕೆ ಕೆಸಿಎನ್ ರಾಜೀನಾಮೆಗೆ ಏನು ಕಾರಣ?
ಕರ್ನಾಟಕ ಚಲನಚಿತ್ರ ರಂಗದ ಹಿರಿಯ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕರಾದ ಕೆಸಿಎನ್ ಚಂದ್ರಶೇಖರ್ ಅವರು ವೈಯಕ್ತಿಕ ಕಾರಣ ಕೊಟ್ಟು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆನೀಡಿದ್ದಾರೆ. ಆದರೆ, ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ ನಿರ್ಮಾಪಕರ ಸಂಘದ ಪೀಠಕ್ಕೆ ಜಗ್ಗೇಶ್ ಅವರು ಭಾರಿ ಲಾಬಿ ನಡೆಸಿದ್ದು, ಚುನಾವಣೆಯೂ ಇಲ್ಲದೆ ಅವಿರೋಧವಾಗಿ ಆಯ್ಕೆ ಆಗುವ ಸಂಭವವೇ ಹೆಚ್ಚು ಎನ್ನಲಾಗಿದೆ.
ಹಿರಿಯ ನಿರ್ಮಾಪಕ ಕೆಸಿಎನ್ ಅವರು ಅಧ್ಯಕ್ಷ ಸ್ಥಾನದಲ್ಲಿರುವ ವರೆಗೂ ಚುನಾವಣೆ ಸಾಧ್ಯವಿಲ್ಲ ಎಂಬುದನ್ನು ಅರಿತ ಒಂದು ಬಣ, ಒತ್ತಡ ಹೇರಲಾರಂಭಿಸಿತ್ತು. ಜಗ್ಗೇಶ್ ಗೆ ಪೈಪೋಟಿ ನೀಡಲು ಮುನಿರತ್ನ ಸಿದ್ದತೆ ನಡೆಸಿದ್ದರು. ಐದು ವರ್ಷಗಳ ನಂತರ ಸಂಘಕ್ಕೆ ಹೊಸಬರ ಅವಶ್ಯಕತೆ ಇದೆ ಅಲ್ಲದೆ ಕೆಸಿಎನ್ ಅವರ ಅಧಿಕಾರವಧಿ ಮುಗಿದಿದೆ ಹಾಗಾಗಿ ಚುನಾವಣೆ ನಡೆಸುವುದು ಅನಿವಾರ್ಯ ಎಂದು ಮುನಿರತ್ನ ಬಣ ಆಗ್ರಹಿಸತೊಡಗಿತ್ತು.
ಇತ್ತೀಚೆಗೆ ನಡೆದ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೆಸಿಎನ್ ಚಂದ್ರು, ಸ್ವಂತ ಇಚ್ಛೆಯಿಂದ ರಾಜೀನಾಮೆ ನೀಡಿ ಹೊರಬಿದ್ದಿದ್ದಾರೆ. ದಕ್ಷಿಣ ಭಾರತ ಫಿಲ್ಮಂ ವಾಣಿಜ್ಯ ಮಂಡಳಿಗೆ ಎರಡೆರಡು ಬಾರಿ ಕೆಸಿಎನ್ ಅಧ್ಯಕ್ಷರಾಗಿದ್ದರು. ಸುಮಾರು 700ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ರೇಷ್ಮೆ ಉದ್ಯಮಿಯೂ ಆಗಿರುವ ಚಂದ್ರು, ಸಿನಿಮಾ ಸಂಘ ಬಿಡಲು ಯಾರು ಏನು ಎಂದು ಯಾರೂ ತಲೆ ಕೆಡಿಸಿಕೊಂಡಿಲ್ಲ.