»   »  ಮೈಹುರಿಗಟ್ಟಲು ವಿಜಯ್ ಗೆ ಅಮೆರಿಕ ಪ್ರೋಟೀನ್!

ಮೈಹುರಿಗಟ್ಟಲು ವಿಜಯ್ ಗೆ ಅಮೆರಿಕ ಪ್ರೋಟೀನ್!

Posted By: *ಜಯಂತಿ
Subscribe to Filmibeat Kannada

ಕೊಬ್ರಿ ಮಂಜು ಮಾತಿಗೆ ಎದುರುನಿಂತರೆಂದರೆ ಬಿಸ್ಕತ್ತುಗಳು ಬೀಳೋದು ಗ್ಯಾರಂಟಿ ಎಂಬ ಜೋಕಿದೆ. ಗುರುವಾರ ಕೂಡ ಅವರು ಮಾತಿನ ಪಟಾಕಿ ಸಿಡಿಸಿದರು. 'ಶಂಕರ್ ಐಪಿಎಸ್" ಚಿತ್ರದ ಮುಹೂರ್ತದ ಸಂದರ್ಭವದು. ಅಲ್ಲಿ ಹೊಮ್ಮಿದ ಮಾತಿನ ಮತಾಪುಗಳು...

*ಸಿನಿಮಾ ನಂಗೆ ಪ್ಯಾಷನ್ನು. ಸೋಲು ಗೆಲುವು ಲೆಕ್ಕಕ್ಕಿಲ್ಲ. ಒಳ್ಳೆ ಸಿನಿಮಾ ತೆಗೀತಾನೇ ಇರ್‍ತೀನಿ.

* ಅವಿನಾಶ್ ಅವರ ಪತ್ನಿ ಮಾಳವಿಕಾಗೆ ನನ್ನ ಸಿನಿಮಾದಲ್ಲಿ ನಟಿಸುವ ಚಾನ್ಸ್ ಇಲ್ಲ. ಅವರೊಂದು ಕಥೆ ಸಿದ್ಧಪಡಿಸುತ್ತಿದ್ದಾರೆ. ಅದಕ್ಕೆ ನಾನೇ ನಿರ್ಮಾಪಕ. ಅವರೇ ನಿರ್ದೇಶಕಿ.

* ದಿನೇಶ್ ಬಾಬುಗೆ ಈಚೆಗೆ ತಲೆ ಸರಿಯಿಲ್ಲ.

* ಎಂ.ಎಸ್.ರಮೇಶ್ ಚೆನ್ನಾಗಿ ಕಥೆ ಹೆಣೆಯುತ್ತಾರೆ. ಯೂತ್‌ಗೆ ಏನೇನು ಬೇಕು ಅಂತ ಅವರಿಗೆ ಗೊತ್ತಿದೆ.

* ಅಮೆರಿಕದಿಂದ ಪ್ರೋಟೀನ್ ತರಿಸಿ ವಿಜಯ್‌ಗೆ ಕೊಟ್ಟು, ಮೈ ಹುರಿ ಮಾಡಿಸಿದ್ದೇವೆ. ಕಿಟ್ಟಿ ಎಂಬ ಟ್ರೇನರ್ ಅವರನ್ನು ತಯಾರು ಮಾಡಿದ್ದಾರೆ.

* ನಾಯಕಿ ಹೆಸರು ಕೆಥರಿನಾ. ಮಾಡೆಲ್ಲು. 'ಮಿಸ್ ವರ್ಲ್ಡ್" ಅಲ್ಲಲ್ಲ; ಮಿಸ್ ಇಂಡಿಯಾಗೆ ಹೋದ ವರ್ಷ ಸ್ಪರ್ಧಿಸಿದ್ದು. ದೇಶದ ಟಾಪ್ ಟೆನ್ ಮಾಡೆಲ್‌ಗಳಲ್ಲಿ ಇವರೂ ಒಬ್ಬರು.

ಈ ಪಿಚ್ಚರ್‌ಗೆ ಬಟ್ಟೆ ತುಂಬಾ ಮುಖ್ಯ. ಡಿಸೈನ್ ಡಿಸೈನಾಗಿರಬೇಕು; ಯೂತ್‌ಫುಲ್ ನೋಡಿ. ಅದಕ್ಕೇ ಕತ್ರಿ ಇರ್ಫಾನ್ ಅಂತ ಡಿಸೈನರನ್ನ ಬಾಲಿವುಡ್‌ನಿಂದ ಕರ್‍ಕೊಂಡು ಬಂದಿದೀವಿ. ರಾಜಶ್ರೀ

ಫಿಲ್ಮ್ಸ್‌ನಲ್ಲಿ ಅವರು ಸಿಕ್ಕಾಪಟ್ಟೆ ಕೆಲಸ ಮಾಡಿದ್ದಾರೆ. ಬ್ಯಾಂಕಾಕ್‌ನಿಂದ ಬಟ್ಟೆ ತರಿಸಿ, ಮುಂಬೈನಲ್ಲಿ ಹೊಲೆಸಿಕೊಂಡು ತಂದಿದ್ದಾರೆ. ಎಲ್ಲಾ ಸೂಪರ್ (ಅವಿನಾಶ್ ಕೂಡ ಈ ಮಾತನ್ನು ಸಮರ್ಥಿಸಿದರು).

ದೊಡ್ಡ ದೊಡ್ಡ ಹಾರಗಳನ್ನು ಅತಿಥಿ ಮಹೋದಯರಿಗೆ ಮಂಜು ಹಾಕಿದರು. ಹಾರದಲ್ಲಿ ಆಪಲ್‌ಗಳನ್ನೂ ಸೇರಿಸಿ ಕಟ್ಟಲಾಗಿತ್ತು. ಹಾರ ಹಾಕಿಸಿಕೊಂಡವರಲ್ಲಿ ಭಾರತಿ, ಗುರುಕಿರಣ್, ರವಿಚಂದ್ರನ್, ಸುದೀಪ್ ಪ್ರಮುಖರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada