ಚಕ್ರತೀರ್ಥ ಖ್ಯಾತಿಯ ನಟ ಬಿ ಎಂ ವೆಂಕಟೇಶ್ ಕಣ್ಮರೆ

ಹುಣಸೂರು ಕೃಷ್ಣಮೂರ್ತಿಗಳ 'ವೀರ ಸಂಕಲ್ಪ' ಚಿತ್ರದ ಮೂಲಕ ಬೆಳ್ಳಿತೆರೆಗೆ ಬಿಎಂವಿ ಅಡಿಯಿಟ್ಟಿದ್ದರು. ಚಕ್ರತೀರ್ಥ, ಜಗನ್ಮೋಹಿನಿ, ರಾಜಶೇಖರ್, ಜ್ವಾಲಾಮೋಹಿನಿ, ಪೋಸ್ಟ್ ಮಾಸ್ಟರ್, ಮದುವೆ ಮದುವೆ, ಮಮತೆಯ ಬಂಧನ, ಮಿಸ್ ಬೆಂಗಳೂರು, ಒಂದೇ ಬಳ್ಳಿಯ ಹೂಗಳು, ಮಲ್ಲಿಗೆ ಸಂಪಿಗೆ, ಅಡ್ಡದಾರಿ, ಗಂಡುಗಲಿ ರಾಮ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನ್ಯಾಯವೇ ದೇವರು, ಗಣೇಶನ ಮದುವೆ, ತಪ್ಪಿದ ತಾಳ, ತಬ್ಬಲಿಯು ನೀನಾದೆ ಮಗನೆ, ಗೋಧೂಳಿ, ಗಂಡುಗಲಿ ರಾಮ, ಮಲ್ಲಿಗೆ ಸಂಪಿಗೆ, ಮಹಾಪುರುಷ ಮತ್ತು ಮಮತೆಯ ಬಂಧನ ಇವು ಬಿಎಂವಿ ನಿರ್ಮಾಣದ ಚಿತ್ರಗಳು. ಇಂದು ಸಂಜೆ ಅವರ ಅಂತ್ಯಕ್ರಿಯೆ ನೆರವೇರಲಿದೆ. ಈ ಬಾರಿಯ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗೂ ಬಿಎಂವಿ ಪಾತ್ರರಾಗಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. (ಏಜೆನ್ಸೀಸ್)
More from Filmibeat
English summary
Kannada films renowned actor and producer BM Venkatesh(77) passes away in his residence in Sadashivanagar, Bangalore on Tuesday morning. Chakratheertha, Jaganmohihi, Rajasekhar, Jwalamohini, Post Master, Ondhe Balliya Hoogalu are his some of films in Kannada.
ನಿಧನ ವಾರ್ತೆ ಹುಣಸೂರು ಕೃಷ್ಣಮೂರ್ತಿ ಕೆಎಫ್ಸಿಸಿ ಗುಬ್ಬಿ ವೀರಣ್ಣ obituary hunsur krishnamurthy kfcc gubbi veeranna


Click it and Unblock the Notifications











