»   » ಹಾಂಕಾಂಗ್ ನಲ್ಲಿ 'ವೀರ' ವನಿತೆ ಮಾಲಾಶ್ರೀ!

ಹಾಂಕಾಂಗ್ ನಲ್ಲಿ 'ವೀರ' ವನಿತೆ ಮಾಲಾಶ್ರೀ!

Posted By:
Subscribe to Filmibeat Kannada

'ಕನ್ನಡದ ಕಿರಣ್ ಬೇಡಿ' ಮಾಲಾಶ್ರೀ ಇದೀಗ ಮತ್ತೊಂದು ಚಿತ್ರದ ಸಿದ್ಧತೆಯಲ್ಲಿದ್ದಾರೆ. ಇದೀಗ ಅವರು 'ವೀರ' ವನಿತೆಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಚಿತ್ರದ ಹೆಸರು 'ವೀರ' ಅಂತ. ನಿರ್ಮಾಪಕ ರಾಮು ಎಂಬುದೇ ನಿಮ್ಮ ಊಹೆಯಾಗಿದ್ದರೆ ಶೇಕಡ ನೂರರಷ್ಟು ಸರಿ!

'ವೀರ' ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಹಾಂಕಾಂಗ್ ಮತ್ತ್ತು ಚೀನಾದಲ್ಲೇ ನಡೆಯಲಿದೆಯಂತೆ. ಉಳಿದ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರು, ಕಾರವಾರ ಮತ್ತು ಮಂಗಳೂರಿನಲ್ಲಿ ನಡೆಯಲಿದೆ ಎನ್ನುತ್ತಾರೆ ನಿರ್ಮಾಪಕ ರಾಮು. ಸಾಯಿಕುಮಾರ್ ಸಹೋದರ ಎಂ.ಕೆ.ಶರ್ಮ ಚಿತ್ರದ ನಿರ್ದೇಶಕರು.

ರಾಮು ನಿರ್ಮಿಸುತ್ತಿರುವ ಮತ್ತೊಂದು ದೊಡ್ಡ ಬಜೆಟ್ ಚಿತ್ರಗಳ ಸಾಲಿಗೆ 'ವೀರ' ಸಹ ಸೇರ್ಪಡೆಯಾಗಲಿದೆ. ಸೂಪರ್ 35 ಎಂಎಂನಲ್ಲಿ ಗ್ರಾಫಿಕ್ಸ್ ಬಳಲಿ ಚಿತ್ರ ತಯಾರಾಗಲಿದೆ. ನವೆಂಬರ್ ಕೊನೆಗೆ ಚಿತ್ರೀಕರಣ ಆರಂಭಿಸುವುದಾಗಿ ನಿರ್ಮಾಪಕ ರಾಮು ತಿಳಿಸಿದ್ದಾರೆ. ರಾಹುಲ್ ದೇವ್, ಆಶಿಶ್ ವಿದ್ಯಾರ್ಥಿ, ಶಿವಾಜಿ ಶಿಂಧೆ, ಸಾಧು ಕೋಕಿಲ, ದೊಡ್ಡಣ್ಣ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada