»   » ಕಿಚ್ಚ ಸುದೀಪ್‍‌ಗೆ ಜೊತೆಯಾದ ತಾರೆ ದೀಪಾ ಸನ್ನಿಧಿ

ಕಿಚ್ಚ ಸುದೀಪ್‍‌ಗೆ ಜೊತೆಯಾದ ತಾರೆ ದೀಪಾ ಸನ್ನಿಧಿ

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್‌ಗೆ ಮಲೆನಾಡ ಮಲ್ಲಿಗೆ ಮೊಗ್ಗು ದೀಪಾ ಸನ್ನಿಧಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ 'ಸಾರಥಿ' ಹಾಗೂ 'ಪರಮಾತ್ಮ' ಚಿತ್ರಗಳಲ್ಲಿ ದೀಪಾ ಸನ್ನಿಧಿ ನಾಯಕಿಯಾಗಿ ಅಭಿನಯಿಸಿದ್ದರು. ಈ ಎರಡೂ ಚಿತ್ರಗಳು ಹಿಟ್ ಆಗಿದ್ದೇ ತಡ ದೀಪಾ 'ಲಕ್ಕಿ' ತಾರೆಯಾಗಿ ರಾತ್ರೋ ರಾತ್ರಿ ಬದಲಾದರು.

ಉದಯ್ ಮೆಹ್ತಾ ನಿರ್ಮಿಸುತ್ತಿರುವ 'ಬಚ್ಚನ್' ಚಿತ್ರಕ್ಕೆ ಶಶಾಂಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸುದೀಪ್‌ಗೆ ಮೂವರು ನಾಯಕಿಯರು. ಮೂವರಲ್ಲಿ ಒಬ್ಬರಾಗಿ ದೀಪಾ ಕಾಣಿಸಲಿದ್ದಾರೆ. ಚಿತ್ರದ ಮತ್ತಿಬ್ಬರ ನಾಯಕಿಯರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. 'ಬಚ್ಚನ್' ಚಿತ್ರದಲ್ಲಿ ದೀಪಾ ಅವರದು ನಿರ್ಣಾಯಕ ಪಾತ್ರ ಎನ್ನಲಾಗಿದೆ.

ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಯನತಾರಾ ಅವರನ್ನು ಕರೆತರಲು ಸಂಪರ್ಕಿಸಲಾಗಿದೆ. ಕತೆ ಇಷ್ಟವಾದರೆ ನಯನತಾರಾ ಸಹಿ ಹಾಕಲಿದ್ದಾರೆ. ಇನ್ನೂ ಮಾತುಕತೆ ಹಂತದಲ್ಲಿರುವುದರಿಂದ ನಯನತಾರಾ ಮತ್ತೊಮ್ಮೆ ಕನ್ನಡ ಚಿತ್ರರಸಿಕರ ಮುಂದೆ ಪಕ್ಕಾ ಆಗಿಲ್ಲ. (ಏಜೆನ್ಸೀಸ್)

English summary
Kannada actress Deepa Sannidhi first time pair-up with Sudeep in his upcoming movie Bachchan. The movie is directign by Shashank and being produced by Uday Mehta. Deepa plays prominent role in this movie

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X