Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸೂಪರ್' ನಿರ್ದೇಶಕನಿಗೆ ಹ್ಯಾಪಿ ಬರ್ತ್‌ಡೇ ಕಣಮ್ಮ!
ಬುದ್ಧಿವಂತ, ಸೂಪರ್ ನಿರ್ದೇಶಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಲವತ್ತ ನಾಲ್ಕನೆ ವಸಂತಕ್ಕೆ ಅಡಿಯಿಡುತ್ತಿರುವ ತಾವು ಉಪ್ಪಿಗಿಂತ ರುಚಿಯಿಲ್ಲ ಎಂದು ಈಗಾಗಲೆ ಅನೇಕ ಬಾರಿ ನಿರೂಪಿಸಿದ್ದೀರಿ. ಇನ್ನು ಮುಂದೆಯೂ ಕನ್ನಡ ಚಿತ್ರರಂಗ ತಮ್ಮಿಂದ ಬಹಳಷ್ಟನ್ನು ನಿರೀಕ್ಷಿಸುತ್ತಿದೆ. ಅದನ್ನು ನೀವು ಕೊಟ್ಟೇ ಕೊಡುತ್ತೀರ ಎಂಬ ನಂಬಿಕೆ ಇದೆ.
ಆದರೆ ಅದ್ಯಾಕೋ ಏನೋ ತಾವು ಸೂಪರ್ ಚಿತ್ರದ ಬಳಿಕ ಸೈಲೆಂಟ್ ಆದ್ರಿ. ಸ್ವಮೇಕ್ ಚಿತ್ರಗಳಲ್ಲಿ ಗುರುತಿಸಿಕೊಂಡ ತಾವು ಹೆಚ್ಚಾಗಿ ರೀಮೇಕ್ ಕಡೆಗೆ ವಾಲುತ್ತಿರುವುದು ತಮ್ಮಲ್ಲಿನ ಸರಕು ಮುಗಿಯಿತೇ ಎಂಬ ಅನುಮಾನ ಮೂಡುವಂತೆ ಮಾಡಿದೆ.
ಸೂಪರ್ ಚಿತ್ರದ ಬಳಿಕ ತೆರೆಕಂಡ ರಜನಿ (ತೆಲುಗು ರೀಮೇಕ್) ಹಾಗೂ ಶ್ರೀಮತಿ (ಹಿಂದಿ ರೀಮೇಕ್) ಚಿತ್ರಗಳು ಬಾಕ್ಸಾಫೀಸರಲ್ಲಿ ನೈಂಟಿ ಕುಡಿಯದೇನೇ ಪಲ್ಟಿ ಹೊಡೆದವು. ಇಷ್ಟು ಸಾಲದು ಎಂಬಂತೆ ಈಗ ಮತ್ತೆ ರೀಮೇಕ್ ಚಿತ್ರಗಳನ್ನು ಕೈಗೆತ್ತಿಕೊಂಡಿದ್ದೀರಿ. ಎಲ್ಲಾ ಗಾಂಧಿನಗರದ ಮಹಾತ್ಮೆ ಏನ್ಮಾಡೋದು ಹೇಳಿ.
ನೀವೇ ಹೇಳಿದಂತೆ "ಪ್ಯೂಚರ್ ಇಲ್ದಿರೋ ದೇಶ, ನೇಚರ್ ಇಲ್ದಿರೋ ನಾಡು, ಟೀಚರ್ಸ್ ಇಲ್ದಿರೋ ಸ್ಕೂಲ್ಸು, ಲೀಡರ್ಸ್ ಇಲ್ದಿರೋ ಪಾರ್ಟೀಸ್, ಪ್ಲಾನಿಂಗ್ ಇಲ್ದಿರೋ ಫ್ಯಾಮಿಲೀಸು, ಒಬ್ಬೊಬ್ಬನಿಗೆ ಡಜನ್ ಡಜನ್ ಮಕ್ಳು, ಅದ್ರಲ್ಲಿ ಅರ್ಧ ಪುಕ್ಲು, ಇನ್ನರ್ಧ ತಿಕ್ಳು ತಿಕ್ಳು...." ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೂ ಒಂದು ಫ್ಯೂಚರ್ ಕೊಡಿ ದೇವರು. ಇಂತಿ ನಿಮ್ಮ ಕಟ್ಟಾ ಅಭಿಮಾನಿ. ಬರ್ತ್‌ಡೇ ಗಿಫ್ಟ್ ಕಳುಹಿಸಿದ್ದೀನಿ ನೋಡಿ.