»   » ಹರೀಶ್ ರಾಜ್ 'ಗನ್' ಚಿತ್ರಕ್ಕೆ ಮಲ್ಲಿಕಾ ಕಪೂರ್

ಹರೀಶ್ ರಾಜ್ 'ಗನ್' ಚಿತ್ರಕ್ಕೆ ಮಲ್ಲಿಕಾ ಕಪೂರ್

Posted By:
Subscribe to Filmibeat Kannada

ಹರೀಶ್ ರಾಜ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ 'ಗನ್'. ಈ ಚಿತ್ರಕ್ಕೆ ನಾಯಕಿಯಾಗಿ 'ಗಂಗಾ ಕಾವೇರಿ', 'ಸವಿ ಸವಿ ನೆನಪು' ಚಿತ್ರಗಳಲ್ಲಿ ನಟಿಸಿದ್ದ ಮಲ್ಲಿಕಾ ಕಪೂರ್ ಆಯ್ಕೆಯಾಗಿದ್ದಾರೆ. ಹರೀಶ್ ರಾಜ್ ಹಾಗೂ ಕಟ್ಟಡ ನಿರ್ಮಾಪಕ ಮುರಳಿ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

'ಗನ್' ಚಿತ್ರ ಜೂನ್.18ರಂದು ಸೆಟ್ಟೇರಲಿದೆ. ಮಂಜು ಮಾಂಡವ್ಯ ಹಾಗೂ ಹರೀಶ್ ರಾಜ್ ಕೂಡಿ ಕತೆಯನ್ನು ಹೆಣೆದಿದ್ದಾರೆ. 'ಕಲಾಕಾರ್' ಚಿತ್ರದ ಮೂಲಕ ಬೆಳ್ಳಿಪರದೆಗೆ ನಾಯಕ ನಟನಾಗಿ ಹರೀಶ್ ರಾಜ್ ಪರಿಚಯವಾಗಿದ್ದರು. ಆದರೆ 'ಕಲಾಕಾರ್' ಚಿತ್ರ ನಿರೀಕ್ಷಿಸಿದಷ್ಟು ಯಶಸ್ಸು ಸಾಧಿಸಲಿಲ್ಲ. ಬಾಕ್ಸಾಫೀಸಲ್ಲಿ ಮುಗ್ಗರಿಸಿ ಹರೀಶ್ ರಾಜ್ ಗೆ ಹೊಸ ಪಾಠಗಳನ್ನು ಕಲಿಸಿದೆ.

'ಕಲಾಕಾರ್' ಚಿತ್ರದಲ್ಲಿ ಮಾಡಿದ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ. ಈ ಬಾರಿ 'ಗನ್' ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತೇನೆ ಎಂಬ ವಿಶ್ವಾಸವನ್ನು ಹರೀಶ್ ರಾಜ್ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ರಾಜಕಾರಣಿಯಾಗಿ ವಾಸಿಂ ಖಾನ್ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಲಿದ್ದಾರೆ.

ಐಟಂ ಬೆಡಗಿ ರಚನಾ ಮೌರ್ಯ ಹಾಗೂ ಸಿಮ್ರಾನ್ ಖಾನ್ ಎರಡು ಐಟಂ ಹಾಡುಗಳಲ್ಲಿ ಅಭಿನಯಿಸಲಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಪಿಟೀಲು ವಾದಕ ರೋನಿ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿರುತ್ತದೆ. ಪೋಷಕ ಪಾತ್ರಗಳಲ್ಲಿ ಶಂಕರ್ ಭಟ್ ಹಾಗೂ ಉಮೇಶ್ ನಟಿಸಲಿದ್ದಾರೆ. ಒಟ್ಟು 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada