For Quick Alerts
  ALLOW NOTIFICATIONS  
  For Daily Alerts

  ಗಣೇಶ್ ಶೈಲೂ ಚಿತ್ರಕ್ಕೆ ರಕ್ಷಕನಾಗದ ಆ'ರಕ್ಷಕ'

  |

  ಶೈಲೂ ಚಿತ್ರ ಐವತ್ತನೇ ದಿನದತ್ತ ಮುನ್ನುಗ್ಗುತ್ತಿದೆ. ಆದರೆ ಅದಕ್ಕೆ ಯಾರೊಬ್ಬರೂ ರಕ್ಷಕರಿಲ್ಲ ಎನ್ನುವುದು ಗಾಂಧಿನಗರದಿಂದ ಬಂದಿರುವ ಸುದ್ದಿ. ಎಕೆಂದರೆ ಶೈಲೂ ಚಿತ್ರ ಐದು ವಾರಗಳಾಗುತ್ತಿದ್ದಂತೆ, "ಅದರ ಕಲೆಕ್ಷನ್ ಕಡಿಮೆಯಾಗಿದೆ, ಅದಿರುವ ಸಾಗರ್ ಥಿಯೇಟರಿನಲ್ಲಿ ಕೋ ಕೋ ತರುತ್ತೇವೆ" ಎಂದಿದ್ದರು ಆರ್ ಚಂದ್ರು.

  ಆದರೆ ಶೈಲೂ ಚಿತ್ರ ಚೆನ್ನಾಗಿಯೇ ಓಡುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತೆ ಅದು ಎತ್ತಂಗಡಿ ಆಗದೇ ಕೋ ಕೋ, ಸಾಗರ್ ಥಿಯೇಟರಿನಲ್ಲಿ ಬಿಡುಗಡೆಯಾಯ್ತು. ಶೈಲೂ ಪಯಣ ಸಾಗರ್ ದಲ್ಲಿ ನಿರಾತಂಕವಾಗಿ ಮುಂದುವರಿಯುತ್ತಿದೆ. ಆದರೆ ಇದೀಗ ಮತ್ತೆ ಶೈಲೂ ಚಿತ್ರಕ್ಕೆ ಕೋ ಕೋ ಬದಲು ಆರಕ್ಷಕ ಚಿತ್ರದಿಂದ ವಿಘ್ನ ಬಂದೊದಗಿದೆ.

  ಈ ತಿಂಗಳು 26ಕ್ಕೆ 'ಆರಕ್ಷಕ' ಚಿತ್ರ ಸಾಗರ್ ಥಿಯೇಟರ್ ಗೆ ಲಗ್ಗೆ ಇಡಲಿದೆ. ಅಷ್ಟರಲ್ಲಿ ಶೈಲೂ ಐವತ್ತನೇ ದಿನ ಮುಗಿಸಿರುತ್ತದೆ. ಆದರೆ ಇನ್ನೂ ಓಡಬಹುದಾದ ಶೈಲೂವನ್ನು ಎತ್ತಂಗಡಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಶೈಲೂ ಚಿತ್ರತಂಡದ ಅಹವಾಲು. ಹೆಸರಿನಲ್ಲಿ 'ಆರಕ್ಷಕ' ಆಗಿದ್ದರೂ ಅದು ಶೈಲೂವನ್ನು ರಕ್ಷಿಸದಿರುವುದು ವಿಪರ್ಯಾಸ. (ಒನ್ ಇಂಡಿಯಾ ಕನ್ನಡ)

  English summary
  Golden star Ganesh movie Shiloo is shifting by Arakshaka movie on 26th in Sagar theater, according to the source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X