ಮತ್ತೆ ರಂಜಿಸಲು ಬರುತ್ತಿದೆ ನಾರದ ವಿಜಯ

ಮಧ್ಯಮ ವರ್ಗದ ಜನರ ಜೀವನದಲ್ಲಿ ಜರಗುವ ಪ್ರಸಂಗಗಳನ್ನು ಆಧರಿಸಿರುವ ಈ ಚಿತ್ರದಲ್ಲಿ ಶಶಿಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸೂರ್ಯ ನಾಯಕನಾಗಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ಮೋಹಿನಿವಿಶ್ವಾಸ್ ಇದ್ದಾರೆ. ನಾಯಕಿ ಮೋಹಿನಿ ಖ್ಯಾತ ನಟ ಅಜಯ್‌ದೇವಗನ್ ಅವರ ಸಂಬಂಧಿ.
ಮಂಜು ದೈವಜ್ಞ ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ನಾರದ ವಿಜಯ' ಚಿತ್ರಕ್ಕೆ ಆದಂ ಸಂಗೀತ ನೀಡಿದ್ದಾರೆ. ಶಿವಕುಮಾರ್ ಕ್ಯಾಮೆರಾ, ಕುಮಾರ್ ಸಂಕಲನ, ಶ್ರೀನಿವಾಸ್ ಕಲೆ ಹಾಗೂ ಅಲ್ಟಿಮೆಟ್ ಶಿವು ಸಾಹಸ ಈ ಚಿತ್ರಕ್ಕಿದ್ದು, ಬ್ಯಾಂಕ್ ಜನಾರ್ದನ್, ಮೋಹನ್ ಜುನೇಜಾ, ಎಂ.ಎನ್.ಲಕ್ಷ್ಮೀದೇವಿ, ಬಿರದಾರ್, ಸುನಿತಾಶೆಟ್ಟಿ, ಜ್ಯೋತಿ, ರುದ್ರಾಣಿ ತಾರಾಬಳಗದಲಿದ್ದಾರೆ.
ಹಾಸ್ಯ ಚಿತ್ರ ಅನಂತನಾಗ್ comedy movie ಅಜಯ್ ದೇವಗನ್ actor shashikumar ಶಶಿಕುಮಾರ್ ajay devagan ನಾರದ ವಿಜಯ ಮೋಹಿನಿವಿಶ್ವಾಸ್ narada vijaya movie actor ananthnag mohini vishwas


Click it and Unblock the Notifications