»   »  'ತುಂಬ ಇಷ್ಟ ಸ್ವಲ್ಪ ಕಷ್ಟ' ಅಂತಾರೆ ಪದ್ಮಜಾರಾವ್!

'ತುಂಬ ಇಷ್ಟ ಸ್ವಲ್ಪ ಕಷ್ಟ' ಅಂತಾರೆ ಪದ್ಮಜಾರಾವ್!

Subscribe to Filmibeat Kannada

ಕಿರುತೆರೆ ಮತ್ತು ಬೆಳ್ಳಿತೆರೆ ನಟಿ ಪದ್ಮಜಾರಾವ್ ನಿರ್ದೇಶಕಿಯ ಕ್ಯಾಪ್ ತೊಟ್ಟಿದ್ದಾರೆ. ಇದನ್ನು ಒಪ್ಪಿಕೊಳ್ಳುವುದು 'ತುಂಬ ಇಷ್ಟ ಸ್ವಲ್ಪ ಕಷ್ಟ'! ಯಾಕೆಂದರೆ ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರದ ಹೆಸರೇ 'ತುಂಬ ಇಷ್ಟ ಸ್ವಲ್ಪ ಕಷ್ಟ'. ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಹೊರತುಪಡಿಸಿದರೆ ಬಹುತೇಕ ಕನ್ನಡದ ಎಲ್ಲ ನಾಯಕ ನಟರಿಗೂ ತಾಯಿಯಾಗಿ ಪದ್ಮಜಾರಾವ್ ಅಭಿನಯಿಸಿದ್ದಾರೆ.

ತಮ್ಮ ನಿರ್ದೇಶನದ ಮೊದಲ ಚಿತ್ರದಲ್ಲಿ ಪದ್ಮಜಾ ಅವರು ಜನಪ್ರಿಯ ನಟರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ದಿಗಂತ್, ಅಂದ್ರಿತಾ ರೇ, ಯಶ್ ಮುಖ್ಯಭೂಮಿಕೆಯಲ್ಲಿದ್ದಾರೆ. ಅನಂತನಾಗ್, ರಂಗಾಯಣ ರಘು ಸೇರಿದಂತೆ ಮುಂತಾದವರು ಪೋಷಕ ಪಾತ್ರದಲ್ಲಿ ಕಾಣಿಸಲಿದ್ದಾರೆ.

'ತುಂಬ ಇಷ್ಟ ಸ್ವಲ್ಪ ಕಷ್ಟ' ಚಿತ್ರಕ್ಕೆ ಸಾಹಿತ್ಯ ಬರೆಯಲು ಜಯಂತ್ ಕಾಯ್ಕಿಣಿ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ. ಕಿರುತೆರೆ ಮತ್ತ್ತು ಸಿನಿಮಾಗಳೊಂದಿಗೆ ಪದ್ಮಜಾ ಅವರಿಗೆ ಕಳೆದ 15 ವರ್ಷಗಳಿಂದ ಒಡನಾಟವಿದೆ. ಮುಂಗಾರು ಮಳೆ ಚಿತ್ರದಲ್ಲೂ ಪದ್ಮಜಾ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ರು.1.60 ಕೋಟಿ ಬಂಡವಾಳ ಹೂಡಲಾಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada