»   » ಈಡಿಯಟ್ ಆಗಲು ಹೊರಟ ಪೂಜಾಗಾಂಧಿ

ಈಡಿಯಟ್ ಆಗಲು ಹೊರಟ ಪೂಜಾಗಾಂಧಿ

Posted By:
Subscribe to Filmibeat Kannada

ಪೂಜಾಗಾಂಧಿ ಚಿತ್ರಗಳು ಆರೇಕ್ಕೇರದ ಮೂರಕ್ಕೇರದ ಸ್ಥಿತಿ ತಲುಪಿದ್ದರೂ ಆಕೆಯ ಬೇಡಿಕೆಗೇನು ಹೊಡೆತ ಬಿದ್ದಿಲ್ಲ. ಹೊಸ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಸುದ್ದಿ ಮಾಡುತ್ತಲೆ ಇದ್ದಾರೆ. ಇತ್ತೀಚೆಗಷ್ಟೇ 'ನಾ ರಾಣಿ ನೀ ಮಹಾರಾಣಿ' ಎಂದಿದ್ದ ಪೂಜಾಗಾಂಧಿ ಇದೀಗ 'ಈಡಿಯಟ್' ಆಗಲು ಹೊರಟಿದ್ದಾರೆ.

'ಈಡಿಯಟ್' ಎಂಬ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ.ಕಾರಣ ಈಗಾಗಲೆ 5 ಈಡಿಯಟ್ಸ್ ಎಂಬ ಚಿತ್ರ ಕನ್ನಡದಲ್ಲಿ ಸಿದ್ಧವಾಗುತ್ತಿದೆ. ಹಾಗಾಗಿ ಈ ಶೀರ್ಷಿಕೆಗೆ ಅನುಮತಿ ದೊರೆಯುತ್ತದೋ ಇಲ್ಲವೋ ಗೊತ್ತಿಲ್ಲ.ಒಟ್ಟಿನಲ್ಲಿ 'ಈಡಿಯಟ್' ಎಂಬ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಆದತ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ರೆಹಮಾನ್ ನಿರ್ಮಾಪಕರು. ಆದತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ನಿರ್ದೇಶನದ ಚಿತ್ರವಿದು. ಈ ಹಿಂದೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ.

ನಾ ರಾಣಿ ನೀ ಮಹಾರಾಣಿ ಚಿತ್ರದಲ್ಲಿ ಪೂಜಾಗಾಂಧಿ ಜೊತೆ ನಟಿಸುತ್ತಿರುವ ಅಕ್ಷಯ್ ಈ ಚಿತ್ರದ ನಾಯಕ ನಟ. ಪೂಜಾಗಾಂಧಿ ಜೊತೆ ಸಂಜನಾ ಮತ್ತು ರಾಗಿಣಿ ಸಹ ಕಾಣಿಸಲಿದ್ದಾರೆ. ಶಂಕರ್, ಹರ್ಷ ಮತ್ತು ಜೀವನ್ ಅವರ ಸಂಭಾಷಣೆ, ನೀಲ್ ಸಂಗೀತ ಹಾಗೂ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ.

ಇದೊಂದು ಪ್ರೇಮ ಮತ್ತು ಹಾಸ್ಯ ಪ್ರಧಾನ ಚಿತ್ರವಾಗಿದ್ದು ಆಗಸ್ಟ್ 12ರಿಂದ ಚಿತ್ರದ ಹಾಡುಗಳ ಧ್ವನಿಮುದ್ರಣ ನಡೆಯಲಿದೆ. ಆಗಸ್ಟ್ ಅಂತ್ಯಕ್ಕೆ ಮುಹೂರ್ತ ನಡೆಯಲಿದ್ದು ಬೆಂಗಳೂರು, ಆಗ್ರಾ, ಜೈಪುರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬಾಲಿವುಡ್ ನ ಇಬ್ಬರು ನಟರು ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada