»   »  ಸಂಜು ವೆಡ್ಸ್ ಗೀತಾದಲ್ಲಿ ಒಂದಾದ ಕಿಟ್ಟಿ, ರಮ್ಯಾ!

ಸಂಜು ವೆಡ್ಸ್ ಗೀತಾದಲ್ಲಿ ಒಂದಾದ ಕಿಟ್ಟಿ, ರಮ್ಯಾ!

Posted By:
Subscribe to Filmibeat Kannada

ಶ್ರೀನಗರ ಕಿಟ್ಟಿ ನಟಿಸಲಿರುವ ಹೊಚ್ಚ ಹೊಸ ಚಿತ್ರ'ಸಂಜು ವೆಡ್ಸ್ ಗೀತಾ ಇನ್ ಹೆವನ್' ಎಂಬುದು ಗೊತ್ತೇ ಇದೆ. ಇದೇ ಮೊದಲ ಬಾರಿಗೆ ಕಿಟ್ಟಿಗೆ ನಾಯಕಿಯಾಗಿ ರಮ್ಯಾ ಆಯ್ಕೆಯಾಗಿದ್ದಾರೆ. ಏತನ್ಮಧ್ಯೆ ಕಿಟ್ಟಿ ಅಭಿನಯದ 'ಸವಾರಿ' ಚಿತ್ರ ಶತಕ ಬಾರಿಸಿದೆ. ಹಾಸ್ಯ ನಟ ನಾಗಶೇಖರ್ ಅವರ ಕಲ್ಪನೆಯ ಕೂಸು 'ಸಂಜು ವೆಡ್ಸ್ ಗೀತಾ ಇನ್ ಹೆವನ್'.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೆ ಮಂಜು ನಿರ್ಮಾಣದ'ಅರಮನೆ' ಚಿತ್ರವನ್ನು ನಾಗಶೇಖರ್ ಈ ಹಿಂದೆ ನಿರ್ದೇಶಿಸಿದ್ದರು. ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಾಕಷ್ಟು ಹೋಂ ವರ್ಕನ್ನು ಮಾಡಿದ್ದೇನೆ ಎನ್ನುತ್ತಾರೆ. ಎಲ್ಲಾ ಸರಿಹೋದರೆ ಇನ್ನೊಂದು ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಈ ಚಿತ್ರದಲ್ಲಿ ಮಳೆ ಮತ್ತು ಟ್ರಾಫಿಕ್ ಮುಖ್ಯ ಪಾತ್ರವಹಿಸುತ್ತವೆ. ಚಿತ್ರದ ಕತೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆಯುತ್ತದೆ ಎನ್ನುತ್ತಾರೆ ನಾಗಶೇಖರ್. ಶ್ರೀನಗರ ಕಿಟ್ಟಿಯ ಮತ್ತೊಂದು ಚಿತ್ರ 'ಮರಳಿ ಮರೆಯಾಗಿ' ಸಹ ಸೆಟ್ಟೇರಲಿದೆ. ಸಂಜು ವೆಡ್ಸ್ ಗೀತಾ ಅಥವಾ ಮರಳಿ ಮರೆಯಾಗಿ ಈ ಎರಡರಲ್ಲಿ ಯಾವುದು ಮೊದಲು ಆರಂಭವಾಗುತ್ತದೆ ಎಂಬುದು ಇನ್ನೂ ಅಂತಿಮವಾಗಿಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada