»   »  'ಮನಸಾರೆ' ಕಣ್ಣಿಗೆ ಔತಣ ನೀಡಲಿದೆ: ಯೋಗರಾಜ್

'ಮನಸಾರೆ' ಕಣ್ಣಿಗೆ ಔತಣ ನೀಡಲಿದೆ: ಯೋಗರಾಜ್

Subscribe to Filmibeat Kannada

ಯೋಗರಾಜ ಭಟ್ ರ 'ಮನಸಾರೆ' ಚಿತ್ರೀಕರಣ ಇನ್ನ್ನೇನು ಮುಕ್ತಾಯವಾಗಲಿದೆ. ಆದರೆ ಚಿತ್ರದ ಮುಖ್ಯ ಪಾತ್ರಧಾರಿಗಳಾದ ದಿಗಂತ್ ಮತ್ತು ಅಂದ್ರಿತಾ ರೇ ಮಾತ್ರ ಇಷ್ಟು ಬೇಗ ಚಿತ್ರೀಕರಣ ಮುಗೀತಾ? ಇನ್ನೂ ಸ್ವಲ್ಪ ದಿನ ಇರಬೇಕಾಗಿತ್ತು ಎಂದು ಯೋಗರಾಜರನ್ನು ಕೇಳಿದ್ದಾರಂತೆ. ಆದರೆ ಯೋಗರಾಜ ಭಟ್ ರು ಗಂಟು ಮೂಟೆ ಕಟ್ಟಲು ಹೇಳಿದ್ದಾರೆ.

ಮನಸಾರೆ ಚಿತ್ರೀಕರಣ ಅಷ್ಟು ಸೊಗಸಾಗಿತ್ತು. ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ. ಇಡೀ ಚಿತ್ರತಂಡದೊಂದಿಗೆ ಸಖತ್ ಎಂಜಾಯ್ ಮಾಡಿದ್ದೀವಿ ಎನ್ನುತ್ತಾರೆ ಅಂದ್ರಿತಾ. ಮೂರನೇ ಬಾರಿಗೆ ಯೋಗರಾಜ್ ಭಟ್ ರ ಚಿತ್ರದಲ್ಲಿ ನಟಿಸುತ್ತಿರುವುದು ನನ್ನ ಅದೃಷ್ಟ ಎನ್ನ್ನುತ್ತಾರೆ ದಿಗಂತ್.

ಸಂಡೂರು, ಗಂಗಾವತಿ, ಕಾರವಾರ ಮತ್ತು ಮಡಿಕೇರಿಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮನಸಾರೆ ಚಿತ್ರತಂಡ ಬೆಂಗಳೂರಿಗೆ ವಾಪಸ್ಸಾಗಿದೆ. ಮನಸಾರೆ ಚಿತ್ರಕ್ಕಾಗಿ ಅತ್ಯ್ಯುತ್ತಮ ಕ್ಯಾಮಾರಾಗಳನ್ನು ಬಳಸಿದ್ದೇವೆ. ನನ್ನ ಹಿಂದಿನ ಚಿತ್ರಗಳಂತೆ ಈ ಚಿತ್ರವೂ ಖಂಡಿತ ಕಣ್ಣಿಗೆ ಔತಣ ನೀಡಲಿದೆ ಎಂಬ ಭರವಸೆ ನೀಡುತ್ತೇನೆ ಎನ್ನ್ನುತ್ತಾರೆ ಯೋಗರಾಜ ಭಟ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada