For Quick Alerts
  ALLOW NOTIFICATIONS  
  For Daily Alerts

  ಜಯನಗರದಲ್ಲಿ ದರ್ಶನ್ ನೋಡಲು ನೂಕು ನುಗ್ಗಲು

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಣ್ಣಾರೆ ನೋಡಲು ಬುಧವಾರ (ಏ.18) ಬೆಳಗ್ಗೆ 11.30ರ ಸುಮಾರಿಗೆ ಭಾರಿ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಬೆಂಗಳೂರಿನ ಜಯನಗರ 3ನೇ ಬ್ಲಾಕ್‌ನಲ್ಲಿ ಜಮಾಯಿಸಿದ್ದರು. ಒನ್‌ಇಂಡಿಯಾ ಕಚೇರಿಯ ಆನೆಬಂಡೆ ರಸ್ತೆಯ ಸಂಜನಾ ಪ್ಲಾಜಾದ ನೆಲಮಹಡಿಯಲ್ಲಿ ಆರ್ ಆರ್ ಗೋಲ್ಡ್ ಪ್ಯಾಲೇಸ್ ನೂತನ ಮಳಿಗೆ ಇಂದು ಉದ್ಘಾಟನೆಯಾಯಿತು.


  ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಲವು ಗಣ್ಯರನ್ನು ಆಹ್ವಾನಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಟ ದರ್ಶನ್ ಹಾಗೂ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಮಳಿಗೆಯ ವಜ್ರದ ವಿಭಾಗವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಚಾಲನೆ ನೀಡಿದರು.

  ಬೆಳ್ಳಿ ವಿಭಾಗವನ್ನು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಉದ್ಘಾಟಿಸಿದರು. ಬಳಿಕ ಅಭಿಮಾನಿಗಳು ತಮ್ಮ ನೆಚ್ಚಿನ ನಟ ದರ್ಶನ್‌ರನ್ನು ನೋಡಲು ಮುಗಿಬಿದ್ದರು. ಈ ಸಂದರ್ಭದಲ್ಲಿ ಕೊಂಚ ನೂಕು ನೂಗ್ಗಲು ಸಂಭವಿಸಿತು. ಆನೆಬಂಡೆ ರಸ್ತೆಯಲ್ಲಿ ವಾಹನ ಸಂಚಾರವೂ ಕೊಂಚ ಅಸ್ತವ್ಯಸ್ಥವಾಯಿತು. ಆದರೆ ದರ್ಶನ್ ಹೆಚ್ಚುಹೊತ್ತು ಇರದೆ ಅಭಿಮಾನಿಗಳ ಕಡೆಗೆ ಕೈಬೀಸಿ ತರಾತುರಿಯಲ್ಲಿ ಹೊರಟುಬಿಟ್ಟರು.

  ಬುಧವಾರ ಸಂಜೆ 6.30ಕ್ಕೆ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಸಿನಿಮಾ ತಾರೆಗಳಾದ ನಟ ರಮೇಶ್ ಅರವಿಂದ್, ನಟಿ ರಾಧಿಕಾ ಪಂಡಿತ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆರ್ ಆರ್ ಗೋಲ್ಡ್ ಪ್ಯಾಲೇಸ್ ವ್ಯವಸ್ಥಾಪಕ ನಿರ್ದೇಶಕ ಆರ್.ರಮೇಶ್ ತಿಳಿಸಿದರು. (ಒನ್‌ಇಂಡಿಯಾ ಕನ್ನಡ)

  English summary
  Kannada actor Challenging Star Darshan, former chief minister H D Kumaraswamy and Other Celebs were present at R.R. Gold Palace Inaugration held at Sanjana Plaza, Jaynagar 3rd Block, Bangalore on 18th, April 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X