For Quick Alerts
ALLOW NOTIFICATIONS  
For Daily Alerts

ನಟ ದರ್ಶನ್ ಜತೆ ಮತ್ತೆ ಒಂದಾದ ನಿಖಿತಾ ತುಕ್ರಲ್

By Rajendra
|

ನಟ ದರ್ಶನ್ ಮತ್ತು ನಿಖಿತಾ ಈಗ ಮತ್ತೆ ಒಂದಾಗುವ ಕಾಲ ಕೂಡಿ ಬಂದಿದೆ. ದರ್ಶನ್‌ಗೆ ಷರತ್ತುಬದ್ಧ ಜಾಮೀನು ಸಿಕ್ಕಿದ ಮೇಲೆ ಇದೇ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಲು ಸಿದ್ಧರಾಗುತ್ತಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರೀಕರಣಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಈ ಚಿತ್ರದ ನಾಯಕಿ ನಿಖಿತಾ ತುಕ್ರಲ್ ಶೀಘ್ರದಲ್ಲೆ ಮತ್ತೆ ಗಾಂಧಿನಗರಕ್ಕೆ ಅಡಿಯಿಡಲಿದ್ದಾರೆ. ನಟ ದರ್ಶನ್ ಕೌಟುಂಬಿಕ ಕಲಹಕ್ಕೆ ನಿಖಿತಾರೇ ಕಾರಣ ಎಂದು ಬಿಂಬಿಸಲಾಗಿತ್ತು. ಈಗ ಮತ್ತೆ ಇಬ್ಬರೂ ಕ್ಯಾಮೆರಾ ಮುಂದೆ ಬರುತ್ತಿದ್ದು ಅವರಿಬ್ಬರ ಆನ್‌ ಸ್ಕ್ರೀನ್ ಕೆಮಿಸ್ಟ್ರಿ ಹೇಗಿರುತ್ತದೋ ಏನೋ ಎಂಬ ಆತಂಕ, ಕುತೂಹಲ ಒಟ್ಟಿಗೆ ಮನೆಮಾಡಿದೆ.

ಈ ಹಿಂದೆ ನಿಖಿತಾ ಹಾಗೂ ದರ್ಶನ್ ಇಬ್ಬರೂ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಆಗೆಲ್ಲಾ ಇಬ್ಬರೂ ಆಫ್ ಸ್ಕ್ರೀನ್, ಆನ್‌ ಸ್ಕ್ರೀನ್ ನಲ್ಲಿ ಜಾಲಿಯಾಗಿರುತ್ತಿದ್ದರು. ಈಗಲೂ ಇಬರಿಬ್ಬರೂ ಅದೇ ಹುಮ್ಮಸ್ಸಿನಲ್ಲಿ ಅಭಿನಯಿಸುತ್ತಾರಾ? ಎಂಬ ಪ್ರಶ್ನೆ ಗಾಂಧಿನಗರಿಗರನ್ನು ಕಾಡುತ್ತಿದೆ.

ಇನ್ನು ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರಂತೂ ಚಿತ್ರೀಕರಣ ಸುಸೂತ್ರವಾಗಿ ನಡೆದರೆ ಸಾಕಪ್ಪಾ ಎಂದು ದೇವರಿಗೆ ಮೊರೆ ಹೋಗಿದ್ದಾರೆ. ಅದರಲ್ಲೂ ರೊಮ್ಯಾನ್ಸ್ ಸೀನ್ಸ್, ಟಪ್ಪಾಂಗುಚ್ಚಿ ಸನ್ನಿವೇಶಗಳ ಚಿತ್ರೀಕರಣದ ವೇಳೆ ಎಲ್ಲಿ ಎಡವಟ್ಟಾಗಿ ಮತ್ತೆ ಕತೆ ಮೊದಲಿಗೆ ಬರುತ್ತದೋ ಎಂಬ ಚಿಂತೆಯಲ್ಲಿ ನಿರ್ಮಾಪಕರಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹೊಗೆಯಾಡುತ್ತಿದೆ. (ಒನ್‌ಇಂಡಿಯಾ ಕನ್ನಡ)

English summary
Kannada actor Darshan and Nikita Thukral reunite again in Krathiveera Sangolli Rayanna. Darshan returns to face the camera after a jail stint following charges of beating up his wife. Now, movie buffs wondering if their on-screen chemistry will work or not. ನಟ ದರ್ಶನ್ ಜತೆ ಮತ್ತೆ ಒಂದಾದ ನಿಖಿತಾ ತುಕ್ರಲ್
 
 

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more