For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಹುಟ್ಟುಹಬ್ಬಕ್ಕೆ 'ಅಣ್ಣಾ ಬಾಂಡ್' ಬಿಡುಗಡೆ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಅಣ್ಣಾ ಬಾಂಡ್'. ಈ ಚಿತ್ರವನ್ನು ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಅಂದರೆ ಏಪ್ರಿಲ್ 24ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಈ ಚಿತ್ರದಲ್ಲಿ ಬಾಂಡ್ ರವಿಯಾಗಿ ಪುನೀತ್ ಕಾಣಿಸಲಿದ್ದಾರೆ. ಬಳಿಕ ಆತ ಜನ ಮೆಚ್ಚಿದ ನಾಯಕನಾಗಿ 'ಅಣ್ಣಾ ಬಾಂಡ್' ಹೇಗಾಗುತ್ತಾನೆ ಎಂಬುದೇ ಚಿತ್ರದ ಕತೆ. ಸಾಮಾನ್ಯವಾಗಿ ಪುನೀತ್ ಸ್ವಂತ ಬ್ಯಾನರ್ ಚಿತ್ರಗಳನ್ನು ಅಣ್ಣಾವ್ರ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲು ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ.

  ಆದರೆ ಕೆಲವೊಮ್ಮೆ ಈ ಆಸೆ ಈಡೇರುತ್ತದೆ. ಕೆಲವೊಮ್ಮೆ ಕಾರಣಾಂತರಗಳಿಂದ ಅದು ಸಾಧ್ಯವಾಗಲ್ಲ. ಆದರೆ 'ಅಣ್ಣಾ ಬಾಂಡ್' ಚಿತ್ರವನ್ನು 83ನೇ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲು ದುನಿಯಾ ಸೂರಿ ತಂಡ ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಪಾರ್ವತಮ್ಮ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ನಿಧಿ ಸುಬ್ಬಯ್ಯ, ಪ್ರಿಯಾಮಣಿ, ಜಾಕಿ ಶ್ರಾಫ್ ಚಿತ್ರದ ತಾರಾಗಣದಲ್ಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Power Star Puneet Rajkumar lead movie Anna Bond releases on April 24th 2012. After tha movie Jackie, Puneeth and Director Suri are back with 'Anna Bond'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X