»   » ಜೂನ್ ತಿಂಗಳಲ್ಲಿ ಹೆಂಡ್ತೀರ ದರ್ಬಾರ್ ತೆರೆಗೆ

ಜೂನ್ ತಿಂಗಳಲ್ಲಿ ಹೆಂಡ್ತೀರ ದರ್ಬಾರ್ ತೆರೆಗೆ

Posted By:
Subscribe to Filmibeat Kannada

ತೆಲುಗು ಹಾಗೂ ತಮಿಳಿನಲ್ಲಿ ಈಗಾಗಲೇ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಂತಹ ಹೆಸರಾಂತ ನಿರ್ದೇಶಕ ವಿ. ಶೇಖರ್ ಅವರು ವಿನೂತನ ಕಾಮಿಡಿ ಕಥಾವಸ್ತುವನ್ನು ಹೊಂದಿರುವ 'ಹೆಂಡ್ತೀರ ದರ್ಬಾರ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ತೆಲುಗಿನಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದ ಜಿ. ರಾಮಚಂದ್ರನ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಪತಿ-ಪತ್ನಿ ಸಂಸಾರದಲ್ಲಿ ಆದಾಯ ಮೀರಿ ಖರ್ಚು ಮಾಡಿಕೊಂಡರೆ ಎಂತೆಂತಹ ಕ್ಲಿಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ನಿರ್ದೇಶಕ ಶೇಖರ್ ನಿರೂಪಿಸಿದ್ದಾರೆ.

ಕಥೆ-ಚಿತ್ರಕಥೆ ಕೂಡ ಅವರದೇ. ಈಗಾಗಲೇ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ. ಇದೊಂದು ರೀಮೇಕ್ ಚಿತ್ರವಾದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಹಾಗೂ ಕನ್ನಡ ಪ್ರೇಕ್ಷಕನ ಹಾಸ್ಯ ಪ್ರಜ್ಞೆಯನ್ನು ಅರಿತಿರುವ ಎಸ್. ಮೋಹನ್ ಈ ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಸಂಭಾಷಣೆಗಳನ್ನು ಕೂಡ ಬರೆದಿದ್ದಾರೆ. ಜಿ.ಆರ್. ಗೋಲ್ಡ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿದೆ.

ಈ ಚಿತ್ರಕ್ಕೆ ಸಾಧುಕೋಕಿಲರ ಸಂಗೀತ ಸಂಯೋಜನೆ, ರಾಜು ಮಹೇಂದ್ರರ ಛಾಯಾಗ್ರಹಣ, ಜೊ.ನಿ. ಹರ್ಷರ ಸಂಕಲನ ಇದ್ದು, ರಮೇಶ್ ಅರವಿಂದ್ ಹಾಗೂ ಮೀನಾ ಪ್ರಧಾನ ಪಾತ್ರದಲಿದ್ದಾರೆ. ಸಾಧುಕೋಕಿಲ, ಅಂಬಿಕಾ ಸೋನಿ, ರಂಗಾಯಣ ರಘು, ಪ್ರೀತಿ ಅಲ್ಲದೆ ನಿರ್ಮಾಪಕ ಜಿ. ರಾಮಚಂದ್ರನ್ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada