»   » ಬೆಳ್ಳಿತೆರೆಯ 'ಎಫ್ ಎಂ ರೇಡಿಯೋ' ಆರಂಭ

ಬೆಳ್ಳಿತೆರೆಯ 'ಎಫ್ ಎಂ ರೇಡಿಯೋ' ಆರಂಭ

Posted By:
Subscribe to Filmibeat Kannada

ಕಿರುತೆರೆಯ ಕಾರ್ಯಕ್ರಮಗಳು ಜನಪ್ರಿಯವಾದ ಹಾಗೆ 'ಎಫ್ ಎಂ ರೇಡಿಯೋ"ದಲ್ಲಿ ಬರುವ ಕಾರ್ಯಕ್ರಮಗಳು ಪ್ರಸಿದ್ಧಿಯಾಗಿವೆ. ವಾಹನ ಸವಾರರಿಗಂತೂ ಈ ರೇಡಿಯೋ ಉತ್ತಮ ಜೊತೆಗಾರ. ಈ ಜನಮನ್ನಣೆಯ 'ಎಫ್ ಎಂ ರೇಡಿಯೋ" ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣವಾಗುತ್ತಿದೆ ಗೋಲ್ಡನ್ ಲಯನ್ ಫಿಲಂಸ್ ಡಿವಿಜನ್ ಲಾಂಛನದಲ್ಲಿ.

ಇತ್ತೀಚೆಗೆ ಸರಳ ಮುಹೂರ್ತ ಸಮಾರಂಭದಲ್ಲಿ ಪ್ರಾರಂಭವಾದ ಈ ಚಿತ್ರವನ್ನು ಸಿ.ಆರ್.ಮನೋಹರ್ ನಿರ್ಮಿಸುತ್ತಿದ್ದಾರೆ. 'ಒರಟ ಐ ಲವ್ ಯು", 'ಜನುಮದ ಗೆಳತಿ" ಹಾಗೂ ಡಾ:ವಿಷ್ಣುವರ್ಧನ್ ಅಭಿನಯದ 'ಸ್ಕೂಲ್ ಮಾಸ್ಟರ್" ಚಿತ್ರಗಳನ್ನು ನಿರ್ಮಿಸಿರುವ ಇವರ ನಾಲ್ಕನೇ ಕಾಣಿಕೆ 'ಎಫ್ ಎಂ ರೇಡಿಯೋ" ಚಿತ್ರ.

ಬೆಂಗಳೂರು, ಮೈಸೂರು, ವಿಜಾಪುರ ಹಾಗೂ ಜೈಪುರಗಳಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದ್ದು, ಚಿತ್ರದಲ್ಲಿ ವಿವಿಧ ಸಾಹಿತಿಗಳು ರಚಿಸಿರುವ ಐದು ಗೀತೆಗಳಿವೆ. ನಿರ್ಮಾಪಕರ ಸಹೋದರ ಸಿ.ಆರ್.ಗೋಪಿಚಂದ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ರಿಶಿಕ್‌ಸಿಂಗ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಶ್ರೀನಿವಾಸಮೂರ್ತಿ, ವಿನಯಾಪ್ರಕಾಶ್, ಅಕ್ಷಯ್, ಜೈಜಗದೀಶ್, ಸುಧಾಬೆಳವಾಡಿ, ಸಾಧುಕೋಕಿಲಾ, ಟೆನ್ನಿಸ್‌ಕೃಷ್ಣ ಹಾಗೂ ಹರೀಶ್‌ರಾಯ್ ಇದ್ದಾರೆ.

ಬಿ.ರಾಮಮೂರ್ತಿ ಅವರು ನಿರ್ದೇಶನದ ನಿರ್ವಹಣೆ ಮಾಡುತ್ತಿದ್ದು, ಜಿ.ಆರ್.ಶಂಕರ್ ಸಂಗೀತ ನೀಡಿದ್ದಾರೆ. ಸುರೇಶ್ ಬೈರಸಂದ್ರ ಕ್ಯಾಮೆರಾ, ನರಹಳ್ಳಿ ಜ್ಞಾನೇಶ್ ಸಂಕಲನ, ಇಸ್ಮಾಯಿಲ್ ಕಲೆ ಹಾಗೂ ಪ್ರಸಾದ್ ಅವರ ಸಹನಿರ್ದೇಶನ 'ಎಫ್ ಎಂ ರೇಡಿಯೋ" ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada