»   »  ಸಾಲುಸಾಲು ಹೊಸ ಚಿತ್ರಗಳಲ್ಲೊಂದು ವಸುಂಧರೆ

ಸಾಲುಸಾಲು ಹೊಸ ಚಿತ್ರಗಳಲ್ಲೊಂದು ವಸುಂಧರೆ

Posted By:
Subscribe to Filmibeat Kannada

ಇಳೆಯ ಮೇಲೆ ಮುಂಗಾರು ಮಳೆ ಬಿದ್ದ ಮೇಲೆ ಕೃಷಿ ಚಟುವಟಿಕೆ ಹೇಗೆ ಚುರುಕುಗೊಳ್ಳುವುದೊ ಹಾಗೆ ಕನ್ನಡ ಚಿತ್ರರಂಗದಲ್ಲಿ 'ಮುಂಗಾರು ಮಳೆ' ಸುರಿದ ಮೇಲೆ ಚಿತ್ರ ನಿರ್ಮಾಣ ದಾಖಲೆಯತ್ತ ದಾಪುಗಾಲು ಹಾಕಿದೆ. ತಂದೆ ಮಗನಿಗಾಗಿ, ಮಗ ತಂದೆಗಾಗಿ, ಕೊನೆಗೆ ತಂದೆಯೇ ಮಗಳಿಗೆ ನಾಯಕನಾಗುವ ಸ್ಥಿತಿಯತ್ತ ಕನ್ನಡ ಚಿತ್ರರಂಗ ಬಂದು ನಿಂತಿದೆ. ಹಿಂದಿನ ವರ್ಷ ಆರಂಭಗೊಂಡ ಸಾಲುಸಾಲು ನೂತನ ಚಿತ್ರಗಳಲ್ಲಿ 'ವಸುಂಧರೆ'ಯೂ ಒಂದು.

ಬೆಂಗಳೂರಿನ ಶ್ರೀಕಂಠೀರವ ಸ್ಟೂಡಿಯೋ, ಕನಕಪುರ ರಸ್ತೆ, ಬಸವೇಶ್ವರ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಬಹು ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ 'ವಸುಂಧರೆ'ಗೆ ಕ್ಲೈಮ್ಯಾಕ್ಸ್ ಹಾಗೂ ಹಾಡುಗಳ ಚಿತ್ರೀಕರಣ ಬಾಕಿಯಿದೆ. ಇದೇ ತಿಂಗಳಲ್ಲಿ ಮಡಿಕೇರಿ, ಮೂಡಿಗೆರೆ, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರದ ಹಾಡುಗಳನ್ನು ಚಿತ್ರೀಕರಿಸಿಕೊಳ್ಳುವುದ್ದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಚೈತ್ರಾ ಫಿಲಂಸ್ ಲಾಂಛನದಲ್ಲಿ ಮನೋಜ್ ಠಾಣ್ಣೆ ಅರ್ಪಿಸಿ ಚಿಕ್ಕರೇವಣ್ಣನವರ ಶುಭಹಾರೈಕೆಯೊಂದಿಗೆ 'ವಸುಂಧರೆ'ಯನ್ನು ನಿರ್ಮಿಸುತ್ತಿರುವ ಟಿ.ಕೆ.ಜಯರಾಂ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಮೈಸೂರು ಮೋಹನ್ ಸಂಗೀತ, ಎಸ್.ಮಲ್ಲಿಕಾರ್ಜುನ್ ಛಾಯಾಗ್ರಹಣ, ರಾಜಶೇಖರರೆಡ್ಡಿ ಸಂಕಲನ, ಅಲ್ಟಿಮೆಟ್ ಶಿವು ಸಾಹಸ, ಮಾಲೂರು ಶ್ರೀನಿವಾಸ್ ನೃತ್ಯ, ಶಿವಕುಮಾರ್ ನಿರ್ಮಾಣ-ನಿರ್ವಹಣೆಯಿರುವ ಚಿತ್ರಕ್ಕೆ ಬಸವರಾಜ್, ಎನ್.ಮುಗುಳ್‌ಕೋಡ್, ಕುಶೋಜಿರಾವ್ ಹಾಗೂ ಜಿ.ಸುರೇಶ್ ಸಹ-ನಿರ್ಮಾಪಕರಾಗಿದ್ದಾರೆ. ರಮೇಶ್ಚಂದ್ರ, ಟೀನಾಪೊನ್ನಪ್ಪ, ಸೃಜನ್‌ಲೋಕೇಶ್, ನಾಗೇಂದ್ರರಾಜೇಅರಸ್, ಮನೋಜ್‌ಕುಮಾರ್ ಠಾಣ್ಣೆ, ರಾಜ್‌ಬಲ್ಲಾಳ್, ಎಂ.ಜೆ.ಮಹೇಶ್, ಮಾಮತಾ ರಾಹುತ್, ರೂಪ, ಚಿಕ್ಕರೇವಣ್ಣ, ಮೈಶುಗರ್ ಗಂಗಾಧರ್ ಮುಂತಾದವರು 'ವಸುಂಧರೆ'ಯ ತಾರಾಬಳಗದಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದೂ ಓದಿ
ಇನಿಯಾ ಚಿತ್ರತಂಡದ ಮೇಲೆ ಪೊಲೀಸರಿಂದ ಹಲ್ಲೆ
ನಾನು ಸಿಎಂ ಆದ್ರೆ ಕನ್ನಡ ಕಡ್ಡಾಯ ಮಾಡುವೆ, ವಿಷ್ಣು
ರಾಜೇಂದ್ರ ಕಾರಂತ್; ಮಂಕಾಗಿ ಉಳಿದ ಪ್ರತಿಭೆ
ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!
ಒತ್ತಿನೆಣಿಯಲ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada