ಪುನೀತ್, ರತ್ನವೇಲು ಸಂಗಮದ ಸಿನಿಮಾ ರದ್ದು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಛಾಯಾಗ್ರಾಹಕ ರತ್ನವೇಲು ಸಂಗಮದ ಸೆಟ್ಟೇರಲಿರುವ ಚಿತ್ರ ರದ್ದಾಗಿದೆ. ಈ ವಿಷಯವನ್ನು ಸ್ವತಃ ಪುನೀತ್ ಸ್ಪಷ್ಟಪಡಿಸಿದ್ದಾರೆ. "ಸೂರಿಯ ಜೊತೆಯ 'ಅಣ್ಣಾ ಬಾಂಡ್' ಮುಗಿಯುವವರೆಗೆ ಯಾವುದೇ ಸಿನಿಮಾಗೆ ಒಪ್ಪಿಕೊಳ್ಳುವ ಮಾತೇ ಇಲ್ಲ" ಎಂದಿದ್ದಾರೆ.
ಈ ಮೊದಲು ದಕ್ಷಿಣ ಭಾರತದ ಹೆಸರಾಂತ ಛಾಯಾಗ್ರಾಹಕ ರತ್ನವೇಲು "ನಾನು ಮತ್ತು ಪುನೀತ್ ಎರಡು ವರ್ಷಗಳಿಂದ ಸಿನಿಮಾ ಮಾಡಬೇಕೆಂದು ಪ್ಲಾನ್ ಮಾಡುತ್ತಿದ್ದೇವೆ. ಇದೀಗ ಆ ಕಾಲ ಕೂಡಿ ಬಂದಿದೆ" ಎಂದಿದ್ದರು. ಆದರೆ ಈಗ ಪುನೀತ್ ಮಾತಿನ ಮೂಲಕ ಈ ಚಿತ್ರ ಅಧೀಕೃತವಾಗಿ ರದ್ದಾದಂತಾಗಿದೆ. ಮುಂದೆ ಯಾವತ್ತೋ ಮಾಡಬಹುದಾದರೂ ಸದ್ಯಕ್ಕಂತೂ ರದ್ದಾಗಿದೆ.
ಇದೇವೇಳೆ ಪುನೀತ್, "ನಿರ್ದೇಶಕ ಗೌತಮ್ ಮೆನನ್ ಬಳಿ ವನ್ನಿತಾಂಡಿ ವರುವಾಯ' ಚಿತ್ರವನ್ನು ಕನ್ನಡದಲ್ಲಿ ಮಾಡುವ ಬಗ್ಗೆ ಮಾತನಾಡಿದ್ದೇನೆ. ಕೈಯಲ್ಲಿರುವ ಪ್ರಾಜೆಕ್ಟ್ ನಿಂದ ಸ್ವಲ್ಪ ಬಿಡುವು ದೊರೆತ ತಕ್ಷಣ ಆ ಸಿನಿಮಾ ಮುಹೂರ್ತ ಘೋಷಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ" ಎಂದಿದ್ದಾರೆ. ಒಟ್ಟಿನಲ್ಲಿ ತಮಿಳು ಚಿತ್ರವೊಂದು ಪುನೀತ್-ಗೌತಮ್ ಮೆನನ್ ಸಂಗಮದಲ್ಲಿ ಸೆಟ್ಟೇರಲಿದೆ ಎಂಬ ಸುದ್ದಿ ಕನ್ನಡ ಸಿನಿಪ್ರೇಕ್ಷಕರಿಗೆ ಪುಳಕ ತರಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











