»   » ಉತ್ತಮ ಚಿತ್ರಗಳತ್ತ ಹರಿಪ್ರಿಯಾ ಚಿತ್ತ

ಉತ್ತಮ ಚಿತ್ರಗಳತ್ತ ಹರಿಪ್ರಿಯಾ ಚಿತ್ತ

Posted By:
Subscribe to Filmibeat Kannada

ಪಾತ್ರಗಳ ಆಯ್ಕೆಯಲ್ಲಿ ನಟಿ ಹರಿಪ್ರಿಯಾ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ. ಪ್ರಸ್ತುತ 'ನಂದೇ' ಎಂಬ ಚಿತ್ರದಲ್ಲಿ ಹರಿಪ್ರಿಯಾ ಬ್ಯುಸಿ. ಇತ್ತೀಚೆಗೆ ತೆರೆಕಂಡ 'ಕಳ್ಳರ ಸಂತೆ' ಚಿತ್ರದಲ್ಲಿನ ಹರಿಪ್ರಿಯಾ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಭಿನಯಕ್ಕೆ ಒತ್ತು ನೀಡಿರುವ ಹರಿಪ್ರಿಯಾ ಅಂತಹ ಚಿತ್ರಗಳಲ್ಲಿ ಮಾತ್ರ ನಟಿಸಲು ನಿರ್ಧರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಬ್ಬ ಅತ್ಯುತ್ತಮ ಅಭಿನೇತ್ರಿ ಎಂದು ಗುರುತಿಸಿಕೊಳ್ಳಬೇಕು ಎಂಬುದು ಹರಿಪ್ರಿಯಾ ಬಯಕೆ. ಹಾಗಾಗಿ ಈಗ ಆಕೆ ಚಿತ್ರಗಳ ಆಯ್ಕೆಯಲ್ಲಿ ಬಹಳ ಚೂಸಿ.

ಈ ಮಧ್ಯೆ ತಮಿಳು ಚಿತ್ರವೊಂದಕ್ಕೂ ಹರಿಪ್ರಿಯಾ ಆಯ್ಕೆಯಾಗಿದ್ದು ಶೀಘ್ರದಲ್ಲೇ ಚೆನ್ನೈ ತಲುಪಲಿದ್ದಾರೆ. ಚಿತ್ರದ ಹೆಸರು 'ಕನಗವೇಲ್ ಕಕ್ಕ'. ತಮಿಳಿನ ಕರಣ್ ಗೆ ಜತೆಯಾಗಿ ಈ ಚಿತ್ರದಲ್ಲಿ ಹರಿಪ್ರಿಯಾ ಮುಖ್ಯಪಾತ್ರದಲ್ಲಿ ಕಾಣಿಸಲಿದ್ದಾರೆ. ಶಿವರಾಜ್ ಕುಮಾರ್ ಜೊತೆ ನಟಿಸಿರುವ 'ಚೆಲುವೆಯೇ ನಿನ್ನೇ ನೋಡಲು' ಚಿತ್ರ ಬಿಡುಗಡೆಯಾಗಬೇಕಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada