ನಾನು ಮೋದಿ ಬೆಂಬಲಿಸುತ್ತಿಲ್ಲ: ಕಾಂಗ್ರೆಸ್ಸಿಗಿತ್ತಿ ರಮ್ಯಾ

By Mahesh

Actress Ramya on supporting Modi
ನಾನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಅನುಯಾಯಿಯಲ್ಲ. ನನ್ನ ನಿಷ್ಠೆ ಎಂದಿದ್ದರೂ ಕಾಂಗ್ರೆಸ್ ಗೆ ಮಾತ್ರ. ನಾನು ಬಿಜೆಪಿ ಪರ ನಿಲುವು ಹೊಂದಿಲ್ಲ ಎಂದು ನಟಿ ರಮ್ಯಾ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೂರು ದಿನಗಳ ಸದ್ಭಾವನಾ ಉಪವಾಸ ವ್ರತ ಕೈಗೊಂಡಿದ್ದ ಬಿಜೆಪಿ ಹಿರಿಯ ನಾಯಕ ನರೇಂದ್ರ ಮೋದಿ ಅವರ ಮೋಡಿಗೆ ಸಿಲುಕಿದ್ದ ನಟಿ ದಿವ್ಯ ಸ್ಪಂದನ ಎಲ್ಲೋ ಮೋದಿ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರು.

ಇದೇ ಕಾರಣ ಇಟ್ಟುಕೊಂಡು ರಮ್ಯಾ ಬಿಜೆಪಿಗೆ ಏಕೆ ಸೇರಬಾರದು,ರಮ್ಯಾ ಅವರಿಗೆ ಇಷ್ಟವಾಗುವ ಭ್ರಷ್ಟಾಚಾರ ವಿರೋಧಿ, ಮಹಿಳೆಯರಿಗೆ ಸಮಾನತೆ ಮುಂತಾದ ಅಂಶಗಳಲ್ಲಿ ಮೋದಿ ಮಾತ್ರ ಯಶ ಸಾಧಿಸಿದ್ದಾರೆ. ರಮ್ಯಾ ಬಿಜೆಪಿ ಸೇರಿದರೆ ಒಳ್ಳೆಯದು ಎಂದು ಬಿಜೆಪಿ ಕಾರ್ಯಕರ್ತರ ಆಸೆಯನ್ನು ಖಾಸಗಿ ವಾಹಿನಿ ಪ್ರಸಾರ ಮಾಡಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿದ ರಮ್ಯಾ, ನಾನು ಬೂತ್ ಮಟ್ಟದ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದೇನೆ. ಈಗಷ್ಟೆ ಮತದಾನ ಮಾಡಿದ್ದೇನೆ. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಯೋಚಿಸಿಲ್ಲ. ಮೋದಿ ಅವರ ಬೆಂಬಲಿಸಿ ನಾನು ಕಾಂಗ್ರೆಸ್ ಗೆ ದ್ರೋಹ ಬಗೆಯುವುದಿಲ್ಲ ಎಂದು ಹೇಳಿದ್ದಾರೆ.

More from Filmibeat

English summary
Actress Ramya aks Divya Spandana is contesting booth level Congress election from Shantinagar in Bangalore. Ramya allegedly supported Narendra Modi fasting. But Ramya has clarified about the allegation and said I'm not follower of Modi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X