»   »  ಮುಂಗಾರು ಮಳೆ ಛಾಯಾಗ್ರಾಹಕ ಕೃಷ್ಣ ತೆಲುಗಿಗೆ

ಮುಂಗಾರು ಮಳೆ ಛಾಯಾಗ್ರಾಹಕ ಕೃಷ್ಣ ತೆಲುಗಿಗೆ

Subscribe to Filmibeat Kannada
Mungaru Male fame cameraman shitfts to Telugu
'ಮುಂಗಾರು ಮಳೆ' ಚಿತ್ರದ ಮಾಂತ್ರಿಕ ಛಾಯಾಗ್ರಹಣಕ್ಕೆ ಮರುಳಾಗದವರಿಲ್ಲ. ತಮ್ಮ ಅದ್ಭುತ ಕೈಚಳಕದ ಮೂಲಕ ಛಾಯಾಗ್ರಾಹಕ ಎಸ್. ಕೃಷ್ಣ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಅವರು ತೆಲುಗು ಚಿತ್ರರಂಗಕ್ಕೆ ಹಾರಿದ್ದಾರೆ. ಪರಭಾಷಾ ಚಿತ್ರಕ್ಕೆ ಕೃಷ್ಣ ಕ್ಯಾಮೆರಾ ಹಿಡಿಯುತ್ತಿರುವುದು ಇದೇ ಮೊದಲಲ್ಲ. 'ಬ್ಲಾಕ್ ಡೈಮಂಡ್' ಎಂಬ ಹಿಂದಿ ಚಿತ್ರಕ್ಕೆ ಅವರು ದಕ್ಷಿಣ ಆಫ್ರಿಕಾವರೆಗೂ ಕ್ಯಾಮೆರಾ ಹಿಡಿದು ಹೋಗಿದ್ದರು.

ಕೃಷ್ಣ ಒಪ್ಪಿಕೊಂಡಿರುವ ತೆಲುಗು ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ತೆಲುಗಿನ 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರದಲ್ಲಿ ನಟಿಸಿದ್ದ ಕನ್ನಡವರೇ ಆದ ಯಶೋಸಾಗರ್ ಈ ಚಿತ್ರದ ನಾಯಕ. ಸತ್ಯ ಐ ಲವ್ ಯು ಚಿತ್ರದಲ್ಲಿ ನಟಿಸಿದ್ದ ಫೇರನ್ ಲವ್ಲಿ ಬೆಡಗಿ ಜೆನಿಲಿಯಾ ಚಿತ್ರದ ನಾಯಕಿಯಾಗುವ ಸಾಧ್ಯತೆಗಳಿವೆ.

ಮುಂಗಾರು ಮಳೆಯ ನಂತರ ಸೂಕ್ತ ಅವಕಾಶಗಳು ಸಿಗದೆ ಹಲವರ ಕಾಲ್ತುಳಿತಕ್ಕೆ ಸಿಕ್ಕಿ ಕೃಷ್ಣ ಒದ್ದಾಡಿದ್ದರು. ಈಗ ತೆಲುಗು ಚಿತ್ರರಂಗ ಅವರನ್ನು ಕೈಬೀಸಿ ಕರೆದಿದೆ. ಕೃಷ್ಣ ಛಾಯಾಗ್ರಹಣದ ಈ ಚಿತ್ರ ಬಹುಶಃ ಮೇ ತಿಂಗಳಲ್ಲಿ ಪ್ರಾರಂಭವಾಗಬಹುದು. ಗೆದ್ದು ಮತ್ತೆ ಕನ್ನಡಕ್ಕೆ ಬರಲಿ ಎಂದು ಹಾರೈಸೋಣವೆ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಯಶಸ್ಸಿನ ಸಾಗರದಲ್ಲಿ ಪಲಾಯನವಾದ ಪ್ರತಿಭೆ
ಗಣೇಶನ ಹೊಸ ಉಲ್ಲಾಸ ನವ ಉತ್ಸಾಹ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada