»   » ತಿಪ್ಪಗೊಂಡನಹಳ್ಳಿ ಬಸ್ ಹತ್ತಿದ ಜಗ್ಗೇಶ್, ಕೋಮಲ್!

ತಿಪ್ಪಗೊಂಡನಹಳ್ಳಿ ಬಸ್ ಹತ್ತಿದ ಜಗ್ಗೇಶ್, ಕೋಮಲ್!

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅಭಿನಯಕ್ಕೆ ಮನ ಸೋಲದವದರ ಸಂಖ್ಯೆ ವಿರಳ. ತಮ್ಮ ಅಮೋಘ ಅಭಿನಯದಿಂದ ಅಭಿಮಾನಿ ಸಮೂಹಕ್ಕೆ ನಗೆಯ ರಸದೌತಣ ನೀಡುವ ಅಪರೂಪದ ಕಲಾವಿದರವರು. ಅವರ ಸಹೋದರ ಕೋಮಲ್ ಕೂಡ ಮೇಲಿನ ಮಾತಿಗೆ ಹೊರತಲ್ಲ. ನಿರ್ದೇಶನ, ಸಂಗೀತ ನಿರ್ದೇಶನದೊಂದಿಗೆ, ನಟನೆಯಲ್ಲೂ ಅದ್ಭುತ ಯಶಸ್ಸು ಕಂಡವರು ಸಾಧುಕೊಕಿಲಾ. ಇವರನ್ನು ತೆರೆಯಲ್ಲಿ ಕಂಡ ಕೂಡಲೆ ಚಪ್ಪಾಳೆ, ಶಿಳ್ಳೆಗಳದೇ ಆರ್ಭಟ. ಮತ್ತೊಬ್ಬ ಕಲಾವಿದ ರಾಜುತಾಳಿಕೋಟೆ. ರಂಗಭೂಮಿಯಲ್ಲಿ ಹೆಚ್ಚಿನ ಅನುಭವ. 'ಮನಸಾರೆ" ಚಿತ್ರದಲ್ಲಿ ಅಭಿನಯಿಸಿ ನೋಡುಗರ ಮನಸೂರೆಗೊಂಡರು. ಇಂತ ಅನುಭವಿ ಕಲಾವಿದರ ಅಭಿನಯ 'ಲಿಫ್ಟ್ ಕೊಡ್ಲಾ" ಚಿತ್ರಕ್ಕೆ ಲಭ್ಯ. .

ಈ ನಾಲ್ವರು ಕಲಾವಿದರು ಒಂದೇ ಬಸ್‌ನಲ್ಲಿ ಕುಳಿತು ತಿಪ್ಪಗೊಂಡನಹಳ್ಳಿ ಸುತ್ತಾಮುತ್ತಾ ಪ್ರಯಾಣಿಸುತ್ತಾರೆ. ಆ ಬಸ್ಸಿನಲ್ಲಿ ಹಾಸ್ಯಭರಿತ ಮಾತುಗಳನ್ನು ಆಡುತ್ತಾರೆ. ಈ ಸನ್ನಿವೇಶವನ್ನು 'ಲಿಫ್ಟ್ ಕೊಡ್ಲಾ" ಚಿತ್ರಕ್ಕಾಗಿ ಚಿತ್ರೀಕರಿಸಿಕೊಂಡ ನಿರ್ದೇಶಕ ಅಶೋಕ್ ಕಶ್ಯಪ್ ಸಂತಸದಲಿದ್ದಾರೆ. 'ಈ ನಾಲ್ವರು ನಟರ ಅಭಿನಯ ಅದ್ಭುತ" ಎಂದು ಪ್ರಶಂಸೆ ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಸಿಕರಿಗೆ ಈ ಚಿತ್ರ ಉತ್ತಮ ಮನೋರಂಜನೆ ನೀಡುವುದಂತು ಸತ್ಯ.

ಸಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ ಎಂ ಆರ್ ಶಂಕರ್‌ರೆಡ್ಡಿ ನಿರ್ಮಿಸುತ್ತಿರುವ 'ಲಿಫ್ಟ್ ಕೊಡ್ಲಾ" ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ರಾಂನಾರಾಯಣ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಛಾಯಾಗ್ರಹಣದ ನಿರ್ವಹಣೆ ಮಾಡುತ್ತಿದ್ದಾರೆ. ಜಗ್ಗೇಶ್, ಕೋಮಲ್, ಅರ್ಚನಾಗುಪ್ತಾ, ಸುದರ್ಶನ್, ರಾಜುತಾಳಿಕೋಟೆ, ಕಿಲ್ಲರ್‌ವೆಂಕಟೇಶ್, ಕಿಶೋರ್, ಶೋಭ್‌ರಾಜ್, ವಿ.ಮನೋಹರ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್ ಮುಂತಾದವರು ಚಿತ್ರದ ತಾರಾಗಣದಲಿದ್ದಾರೆ. ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada