ಜೂನಿಯರ್ ಎನ್ಟಿಆರ್ ಮದುವೆ; ಮಂಟಪಕ್ಕೇ ರು.18 ಕೋಟಿ!

By Rajendra

ತೆಲುಗು ಚಿತ್ರರಂಗ ಮತ್ತೊಂದು ಅದ್ದೂರಿ ಮದುವೆ ಸಿದ್ಧವಾಗುತ್ತಿದೆ. ಈ ಹಿಂದೆ ಅಲ್ಲು ಅರ್ಜುನ್ ಮದುವೆ ವರ್ಣ ರಂಜಿತವಾಗಿ ನಡೆದಿತ್ತು. ಈಗ ತೆಲುಗು ಚಿತ್ರರಂಗದ ಯಂಗ್ ಟೈಗರ್ ಎಂದೇ ಬಿರುದಾಂಕಿತನಾದ ಜೂನಿಯರ್ ಎನ್ಟಿಆರ್ ಮದುವೆಗೆ ಮಂಗಳ ವಾದ್ಯಗಳು ಮೊಳಗಲಿವೆ. ಮೇ 5ರಂದು ಜೂನಿಯರ್ ಎನ್ಟಿಆರ್ ಮದುವೆ ಪ್ರಣತಿ ರೆಡ್ಡಿಯೊಂದಿಗೆ ಹೈದರಾಬಾದ್‌ನ ಹೈಟೆಕ್ಸ್‌ನಲ್ಲಿ ಪಂಚತಾರಾ ವೈಭವಗದೊಂದಿಗೆ ನಡೆಯಲಿದೆ.

ಜೂನಿಯರ್ ಎನ್ಟಿಆರ್ ಹಾಗೂ ಅವರ ತಂದೆ ಹರಿಕೃಷ್ಣ ನಿನ್ನೆಯಷ್ಟೆಒಟ್ಟಿಗೆ ಹೋಗಿ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರಿಗೆ ಮೊದಲ ಆಮಂತ್ರಣ ಪತ್ರವನ್ನು ನೀಡಿ ಬಂದಿದ್ದಾರೆ. ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗದ ಹಲವಾರು ತಾರೆಗಳನ್ನು ಮದುವೆ ಆಹ್ವಾನಿಸಲಾಗಿದೆ. ಮದುವೆ ಆಮಂತ್ರಣ ಪತ್ರಿಕೆಯೊಂದರ ಬೆಲೆ ರು. 3,000 ಅಂದರೆ ನೀವೇ ಊಹಿಸಿ

ಮದುವೆ ಮಂಟಪನಿರ್ಮಾಣಕ್ಕೆ ರು. 18 ಕೋಟಿ ಖರ್ಚು ಮಾಡಲಾಗಿದೆ. ಅಭಿಮಾನಿಗಳಿಗೆಂದೇ ವೋಲ್ವೋ ಬಸ್‌ಗಳನ್ನು ಬುಕ್ ಮಾಡಲಾಗಿದೆ. ಆಂಧ್ರದ ಪ್ರತಿ ಜಿಲ್ಲೆಯಿಂದ 150 ಅಭಿಮಾನಿಗಳನ್ನು ಕರೆಸಲಾಗುತ್ತಿದೆ. ಮದುವೆಗೆ ಬರುತ್ತಿರುವ ಅತಿಥಿಗಳಿಗಾಗಿ ನಾಲ್ಕು ಪಂಚತಾರಾ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದೆ.

ಮದುವೆ ಮಂಟಪದಲ್ಲಿ ಯಾವುದೇ ನೂಕು ನುಗ್ಗಲು ಸಂಭವಿಸದಂತೆ ತಡೆಯಲು ನಂದಮೂರಿ ಅಭಿಮಾನಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಆಂಧ್ರಾದಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ಮದುವೆಯನ್ನು ನಡೆಸಲು ಜೂನಿಯರ್ ಎನ್ಟಿಆರ್ ಕುಟುಂಬಿಕರು ನಿರ್ಧರಿಸಿದ್ದಾರೆ. ಮುಂದೆಯೂ ನಡೆಯುತ್ತದೋ ಇಲ್ಲವೋ ಎಂಬಂತೆ ಮದುವೆ ಸಿದ್ಧತೆಗಳು ನಡೆಯುತ್ತಿವೆ. ತೆಲುಗು ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆ ಎಂದೇ ಹೇಳಬೇಕು.

More from Filmibeat

English summary
Here is the Young tiger Jr NTR’s marriage highlights. The cost of the wedding card is Rs 3000 each. Mandapam set cost around Rs 18 Crores. Four 5 star hotels booked for the guests. Junior NTR, who is tying the knot with Pranathi Reddy on May 05 at Hitex in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X