For Quick Alerts
  ALLOW NOTIFICATIONS  
  For Daily Alerts

  ಮಾ.2 : ಅಲೆಮಾರಿಗೆ ಸಂಕ್ರಾಂತಿ, ವಿಲನ್ ಕಾಟ

  By Mahesh
  |

  ಮಾರ್ಚ್ 2 ರಂದು ಬಿಡುಗಡೆಗೊಳ್ಳುವ ಚಿತ್ರಗಳ ಪಟ್ಟಿಗೆ ರಾಜೇಂದ್ರ ಸಿಂಗ್ ಬಾಬು ಮಗ ಆದಿತ್ಯ ಅವರ ಹೊಸ ಚಿತ್ರ ಕೂಡಾ ಸೇರ್ಪಡೆಗೊಂಡಿದೆ.

  ಯೋಗೀಶ್ ಹುಣಸೂರು ನಿರ್ಮಾಣದ ಎಂಎಸ್ ರಮೇಶ್ ನಿರ್ದೇಶನದ 'ವಿಲನ್' ಚಿತ್ರವನ್ನು ಮಾರ್ಚ್ 2 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಮುಸ್ಸಂಜೆ ಮಹೇಶ್ ನಿರ್ದೇಶನದ ಜಗ್ಗೇಶ್ ಪುತ್ರ ಗುರುರಾಜ್ ಹಾಗೂ ರೂಪಿಣಿ ಮುಖ್ಯಭೂಮಿಕೆಯಲ್ಲಿರುವ 'ಸಂಕ್ರಾಂತಿ' ಚಿತ್ರವನ್ನು ಮಾ.2 ರಂದು ತೆರೆಗೆ ಬರಲಿದೆ ಎಂದು ನಿರ್ಮಾಪಕ ಆರ್ ಎಸ್ ಗೌಡ ಈಗಾಗಲೇ ಅನೌನ್ಸ್ ಮಾಡಿದ್ದಾರೆ.

  ಈ ಚಿತ್ರಗಳ ಸಾಲಿಗೆ ಲೂಸ್ ಮಾದ ಖ್ಯಾತಿ ಯೋಗೀಶ್ ಹಾಗೂ ರಾಧಿಕಾ ಪಂಡಿತ್ ಅವರ ಅಲೆಮಾರಿ ಚಿತ್ರ ಕೂಡಾ ಸೇರದೆ. ಅಲೆಮಾರಿ ಚಿತ್ರವನ್ನು ಹೊಸಬ ಸಂತು ನಿರ್ದೇಶಿಸಿದ್ದರೆ ಬೆಂಕೊಶ್ರೀ ಅವರ ನಿರ್ಮಾಣವಿದೆ.

  ತೆರೆಗೆ ಬರಲು ಕ್ಯೂ ನಿಂತಿರುವ ಚಿತ್ರಗಳ ಪಟ್ಟಿ ನೋಡಿದ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಬ್ಯಾನರ್ ನ 'ಲಕ್ಕಿ' ಚಿತ್ರವನ್ನು ಒಂದು ವಾರ ಮುಂಚಿತವಾಗಿ ಫೆ.24 ರಂದು ಬಿಡುಗಡೆ ಮಾಡುತ್ತಿದ್ದಾರೆ. ಫೆ.24ರಂದು ಲಕ್ಕಿ ಜೊತೆಗೆ ಹೊಸಬರ 'ಸನಿಹ ' ಚಿತ್ರ ಕೂಡಾ ತೆರೆ ಕಾಣಲಿದೆ.

  ಮಾ.2ರಂದು ಚಿತ್ರಮಂದಿರಗಳ ಸಮಸ್ಯೆ ತಪ್ಪಿಸಲು ಅಲೆಮಾರಿ ಚಿತ್ರದ ಬಿಡುಗಡೆ ಒಂದು ವಾರ ಮುಂದೂಡುವ ಸಾಧ್ಯತೆಯೂ ಇದೆ ಎಂದು ಗಾಂಧಿನಗರದಲ್ಲಿ ಸುದ್ದಿ ಹಬ್ಬಿದೆ. ಒಟ್ಟಿನಲ್ಲಿ ವಾರಕ್ಕೆ ಮೂರು ಕನ್ನಡ ಚಿತ್ರ ಬಿಡುಗಡೆಯಾಗುವುದೆಂದರೆ ಕನ್ನಡ ಚಿತ್ರರಂಗದಲ್ಲಿ ಕಾಮನ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

  English summary
  Adithya starrer Villain produced by Yogish Hunasur and directed by M.S.Ramesh will be competing with Sankranthi by Mussanje Mahesh with Gururaj and Roopashir in lead roles on March 2. Loose Mada starrer Alemari is also set to release on the same day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X