ರಾ ಒನ್ ಚಿತ್ರದಿಂದ ಕನ್ನಡ ಚಿತ್ರಗಳಿಗೆ ಹೊಡೆತ?

ಅದಕ್ಕೆ ಬಹಳಷ್ಟು ಉದಾಹರಣೆ ಕೊಡ ಬಹುದು. ಇತ್ತೀಚಿಗೆ ಬಿಡುಗಡೆಗೊಂಡ ಮಹೇಶ್ ಬಾಬು ಅವರ ದೂಕುಡು, ಜ್ಯೂ. ಎನ್ಟಿಆರ್ ಅಭಿನಯದ ಊಸರವಳ್ಳಿ ಚಿತ್ರಗಳು ಚಲನಚಿತ್ರ ಮಂಡಳಿಯ ನಿಯಮಗಳನ್ನು ಗಾಳಿಗೆ ತೋರಿ ರಾಜ್ಯದಲ್ಲಿ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡವು. ಇದರಿಂದ ಉತ್ತಮ ಪ್ರದರ್ಶನ ಕಾಣುತ್ತಿದ್ದ ಲೈಫು ಇಷ್ಟೇನೆ, ಕಳ್ಳ ಮಳ್ಳ ಸುಳ್ಳ ಚಿತ್ರಗಳು ಕೆಲ ಚಿತ್ರಮಂದಿರದಿಂದ ಎತ್ತಂಗಡಿಯಾದವು.
ಇನ್ನು ಮುಂದಿನ ವಾರ ವಿಜಯ್ ಮತ್ತು ಸೂರ್ಯ ಅಭಿನಯದ ತಮಿಳು ಚಿತ್ರಗಳು ಬಿಡುಗಡೆ ಗೊಳ್ಳುತ್ತಿವೆ. ವಿಜಯ್ ಅಭಿನಯದ ಚಿತ್ರಕ್ಕೆ ಕೊಬ್ಬರಿ ಮಂಜು ಹಂಚಿಕೆದಾರರು. ಹಾಗಾಗಿ ಮಂಡಳಿಯ ನಿಯಮ ಇವರಿಗೆ ಅನ್ವಯವಾಗುವುದಿಲ್ಲವೇನೋ?
ಇದಷ್ಟೇ ಸಾಲದಂತೆ ಶಾರೂಖ್ ಖಾನ್ ನಿರ್ಮಿಸಿ, ನಟಿಸುತ್ತಿರುವ ಅವರ ಮಹತ್ವಾಕಾಂಕ್ಷೆಯ ರಾ ಒನ್ ಚಿತ್ರ ದೀಪಾವಳಿಗೆ (ಅ 26) ಬಿಡುಗಡೆ ಗೊಳ್ಳಲು ಸಜ್ಜಾಗಿದೆ. ಪ್ರೀರಿಲೀಸ್ ಶೋ ನಲ್ಲೆ ಕೋಟಿ ಕೋಟಿ ಬಾಚಿರುವ ರಾ ಒನ್, ದೇಶಾದ್ಯಂತ 3000 ಕೊ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ಅಲ್ಲದೆ ದೇಶದ 550 ಆಯ್ದ ಚಿತ್ರಮಂದಿರಗಳಲ್ಲಿ 3ಡಿ ತಂತ್ರಜ್ಞಾನದಲ್ಲಿ ಚಿತ್ರ ರಿಲೀಸ್ ಆಗಲಿದೆ.
ಅಂದ ಮೇಲೆ ಕನ್ನಡ ಚಿತ್ರಗಳಿಗೆ ಪೆಟ್ಟು ಬೀಳುವುದು ಖಂಡಿತ ಅದರಲ್ಲೂ ಮಲ್ಟಿಪ್ಲೆಕ್ಷ್ ಗಳಲ್ಲಿ. ಅಲ್ಲದೇ ಸಾರಥಿ ಮತ್ತು ಪರಮಾತ್ಮ ಚಿತ್ರ ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ಸಂಖ್ಯೆಯಲ್ಲೂ ಇಳಿಮುಖವಾಗುವುದಂತೂ ಪಕ್ಕಾ.


Click it and Unblock the Notifications











