ಎಚ್ಡಿಕೆ ದ್ವಿಪತ್ನಿತ್ವ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ

ಐಪಿಸಿ ಸೆಕ್ಷನ್ 494ರ ಪ್ರಕಾರ ಕಾನೂನುಬಾಹಿರವಾಗಿ ಎರಡನೇ ಮದುವೆಯಾಗುವುದು ಶಿಕ್ಷಾರ್ಹ ಅಪರಾಧ. ಆದರೆ ಎಚ್ ಡಿ ಕುಮಾರಸ್ವಾಮಿ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಕಾನೂನುಬಾಹಿರವಾಗಿ ಇನ್ನೊಬ್ಬರನ್ನು ಮದುವೆಯಾಗಿದ್ದಾರೆ.
ಕಾನೂನುಬಾಹಿರವಾಗಿ ಎರಡು ಮದುವೆಯಾಗಿರುವ ಕುಮಾರಸ್ವಾಮಿ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಅವರು ರಿಟ್ ಅರ್ಜಿಯಲ್ಲಿ ಹೈಕೋರ್ಟನ್ನು ಕೋರಿದ್ದಾರೆ. ಗುರುವಾರ(ಅ.20) ಅಥವಾ ಶುಕ್ರವಾರ (ಅ.21) ಎಚ್ಡಿಕೆ ವಿರುದ್ಧದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಕುಮಾರಸ್ವಾಮಿ ಅವರು ಯಾರನ್ನು ಎರಡನೇ ಮದುವೆಯಾಗಿದ್ದಾರೆ, ಯಾವಾಗ ಆಗಿದ್ದಾರೆ ಎಂಬ ವಿವರಗಳನ್ನು ರಿಟ್ ಅರ್ಜಿಯಲ್ಲಿ ನೀಡಲಾಗಿದ್ದು, ವಿಚಾರಣೆ ವೇಳೆ ಆ ವಿವರಗಳು ಬಹಿರಂಗವಾಗಲಿವೆ. ಈಗಾಗಲೆ ಎಚ್ಡಿಕೆ ದಂಪತಿಗಳ ಮೇಲೆ ಜಂತಕಲ್ ಗಣಿ ಗುತ್ತಿಗೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆಯ ತೂಗುಗತ್ತಿ ನೆತ್ತಿ ಮೇಲೆ ತೂಗುತ್ತಿರುವುದು ಗೊತ್ತೇ ಇದೆ.
ವೈಎಸ್‌ವಿ ದತ್ತ ಪ್ರತಿಕ್ರಿಯೆ: ಈ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ ಅವರು, ರಿಟ್ ಅರ್ಜಿಯನ್ನು ಯಾರು ಬೇಕಾದರೂ ಸಲ್ಲಿಸಬಹುದು. ಇದರಲ್ಲಿ ಅಂತಹ ವಿಶೇಷವೇನಿಲ್ಲ. ಆದರೆ ಕೆಲವರು ಪ್ರಚಾರಕ್ಕಾಗಿ ರಿಟ್ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇದು ಆ ತರಹದ್ದೇ. ಹೈಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಂಡರೆ ಆಗ ನಾವು ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಮುಂದೆ ಓದಿ... ನಟಿ ರಾಧಿಕಾಗೆ ಕುಮಾರಸ್ವಾಮಿ ಏನಾಗಬೇಕು?


Click it and Unblock the Notifications











