For Quick Alerts
  ALLOW NOTIFICATIONS  
  For Daily Alerts

  ಲೈಫು ಇಷ್ಟೇನೆ ಚಿತ್ರಕ್ಕೆ ಕ್ಲೀನ್ ಬೌಲ್ಡ್ ಆದ ಯಡ್ಡಿ

  |

  ಹಾಲಿ ಆಗಿದ್ದಾಗಲೂ ಮಾಜಿ ಆದಾಗಲೂ ಯಡಿಯೂರಪ್ಪ ಏನೇ ಟೆನ್ಷೆನ್ ಇದ್ದರೂ ಚಿತ್ರ ವೀಕ್ಷಣೆ ಮಾಡುವದು ಅವರಿಗೆ ಒಂದು ರೀತಿಯ ಹಾಬಿ. ಭಾನುವಾರದಂದು (ಸೆ.18) ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತ ದಿಗಂತ್ ಮುಖ್ಯ ಭೂಮಿಕೆಯಲ್ಲಿರುವ 'ಲೈಫು ಇಷ್ಟೇನೆ' ಚಿತ್ರ ವೀಕ್ಷಿಸಿದ್ದಾರೆ.

  ಚಿತ್ರ ವೀಕ್ಷಿಸಿದ ಬಿಎಸ್‌ವೈ, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ದಿಗಂತ್ ನಟನೆ ಚೆನ್ನಾಗಿದೆ. ನಿರ್ದೇಶಕರು ಒಳ್ಳೆ ಚಿತ್ರ ನೀಡಿದ್ದಾರೆ. ಕುಟುಂಬ ಸಮೇತ ಚಿತ್ರ ವೀಕ್ಷಿಸಿದ್ದು ಸಂತೋಷ ತಂದಿದೆ. "We have enjoyed" ಎಂದು ಚಿತ್ರತಂಡಕ್ಕೆ ಶಹಬಾಸ್ ಗಿರಿ ಕೊಟ್ಟಿದ್ದಾರೆ.

  ದಿಗಂತ್, ಸಂಯುಕ್ತಾ ಬೆಳವಾಡಿ, ರಮ್ಯಾ ಬಾರ್ನಾ, ಸಿಂಧು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಕಾಣುತ್ತಿದೆ. ಚಿತ್ರದ ಬಗ್ಗೆ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಚಿತ್ರ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಶುಕ್ರವಾರದಂದು (ಸೆ.16) ಚಿತ್ರತಂಡ ಪ್ರೀಮಿಯರ್ ಶೋ ಏರ್ಪಾಟು ಮಾಡಿತ್ತು.

  ಶೋನಲ್ಲಿ ಸಿನಿಮಾ ಮತ್ತು ರಾಜಕೀಯ ರಂಗದ ಬಹಳಷ್ಟು ಮಂದಿ ಭಾಗವಹಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್, ರೇಣುಕಾಚಾರ್ಯ, ರಾಣಿ ಸತೀಶ್, ಬಿಂಬಾ ರಾಯ್ಕರ್, ಮೋಟಮ್ಮ, ತಾರಾ, ಅಜಯ್ ರಾವ್, ಅಜಿತ್ ಭಾಗವಹಿಸಿದ್ದ ಪ್ರಮುಖರು. ಎಲ್ಲರೂ ಚಿತ್ರದ ಬಗ್ಗೆ ಒಳ್ಳೆ ಮಾತಾಡಿದ್ದು ಚಿತ್ರತಂಡವನ್ನು ಮತ್ತಷ್ಟು ಖುಷಿಗೊಳಿಸಿತು. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Former Chief Minister of Karnataka BS Yeddyurappa wathched Kannada movie Lifu Ishtene with his family and lauds the making of the movie. Lifu Ishtene movie is a romantic comedy. How do young boys express their undying love to so many girls!?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X