»   » ಶಿವಾಜಿ ಭರ್ಜರಿ ಸೆಂಚುರಿ! ಅದಕ್ಕೇನು ಅನ್ನಬೇಡಿ ಪ್ಲೀಸ್!

ಶಿವಾಜಿ ಭರ್ಜರಿ ಸೆಂಚುರಿ! ಅದಕ್ಕೇನು ಅನ್ನಬೇಡಿ ಪ್ಲೀಸ್!

Posted By: Staff
Subscribe to Filmibeat Kannada


ಮಾನ್ಯರೇ,

ಶಿವಾಜಿ ಚಿತ್ರದ ಬಗ್ಗೆ ನಾನಿಲ್ಲಿ ಬರೆಯುತ್ತೇನೆ. ರಜನಿಕಾಂತ್ ಅಭಿನಯದ ಈ ಚಿತ್ರ ಇಂಡಿಯಾದಲ್ಲಿ ಮಾತ್ರವಲ್ಲ ಅಮೆರಿಕಾದಲ್ಲೂ ಸೆಂಚುರಿ ಭಾರಿಸಿದೆ. ಹೀಗೆ ಅಮೆರಿಕಾದಲ್ಲೂ ಸೆಂಚುರಿ ಭಾರಿಸಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

40ದೇಶಗಳಲ್ಲಿ 800ಪ್ರಿಂಟ್ ಗಳು. ಹೌದು! ಇದು ಹೇಳಿ ಕೇಳಿ ದೊಡ್ಡ ಬಜೆಟ್ಟಿನ ಚಿತ್ರ. ಯುಎಸ್, ಕೆನಡಾ ಸೇರಿದಂತೆ ಎಲ್ಲೆಡೆ ಶಿವಾಜಿ ಜಯಭೇರಿ ಜೋರಾಗಿದೆ. ಬ್ರಿಟನ್ ನಲ್ಲಿ ಹಣ ಗಳಿಕೆಯ ಟಾಪ್ 10 ಚಿತ್ರಗಳಲ್ಲಿ ಇದೂ ಒಂದಾಗಿತ್ತು. ಶ್ರೀಲಂಕಾದಲ್ಲಿ 12ಕಡೆ, ಸಿಂಗಾಪುರದಲ್ಲಿ 2ಕಡೆ ಶಿವಾಜಿ ನೂರು ದಿನ ಪೂರೈಸುತ್ತಿದೆ.

ತಮಿಳುನಾಡಿನ 90ಚಿತ್ರಮಂದಿರಗಳಲ್ಲಿ, ದೇಶದ ವಿವಿಧ ನಗರಗಳಲ್ಲಿ, ಬೆಂಗಳೂರಿನ 3ಚಿತ್ರಮಂದಿರಗಳಲ್ಲಿ ಅಷ್ಟು ಮಾತ್ರವಲ್ಲ ಮೈಸೂರಿನ ಒಂದು ಚಿತ್ರಮಂದಿರದಲ್ಲಿ ಗುರುವಾರ(ಸೆ.20)ಶಿವಾಜಿ ನೂರು ದಿನ ಪೂರೈಸಲಿದೆ.

ಈ ಮಾಹಿತಿಯನ್ನೆಲ್ಲಾ ಕಂಡಾಗ ಒಂದು ಕ್ಷಣ ಖುಷಿ, ಇನ್ನೊಂದು ಕ್ಷಣ ತಲ್ಲಣ ಮತ್ತು ಚಿಂತೆ ನನ್ನ ಮನದಲ್ಲಿ. ಭಾರತೀಯ ಚಿತ್ರವೊಂದು ಗೆದ್ದದ್ದು ಖುಷಿಗೆ ಕಾರಣ. ನಮ್ಮ ಕನ್ನಡ ಚಿತ್ರಗಳಿಗೆ ಯಾವಾಗ ಈ ಯೋಗ ಬರುತ್ತದೆ ಎಂಬುದು ಚಿಂತೆಗೆ ಕಾರಣ. ನಮ್ಮ ಮಾರುಕಟ್ಟೆ ಚಿಕ್ಕದು, ಇಂಥ ಪ್ರಯೋಗಗಳ ಮಾಡಲಾಗದು ಎಂದು ನಾವು ನೂರು ಕಾರಣ ಪಟ್ಟಿ ಮಾಡಬಹುದು. ಆದರೂ ಎಲ್ಲೋ ಒಂದು ಮೂಲೆಯಲ್ಲಿ ನಾವು ನಿಂತಿದ್ದೇವೆ ಅನಿಸುತ್ತದೆ.

ಪುಷ್ಪಪಾದ

;
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada