»   » 2 ಕೋಟಿ ರೂ.ವೆಚ್ಚದಲ್ಲಿ ಸುದೀಪ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್

2 ಕೋಟಿ ರೂ.ವೆಚ್ಚದಲ್ಲಿ ಸುದೀಪ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಅವರು ಊಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಹೌದು ಊಟಿ ಎಂದಾಕ್ಷಣ ನಮಗೆ ತಕ್ಷಣ ನೆನಪಾಗುವುದು ತಂಪಾದ ವಾತಾವರಣ, ಗುಡ್ಡ-ಬೆಟ್ಟ, ಹಸಿರು ಹುಲ್ಲು, ಪ್ರಕೃತಿ ರಮಣೀಯವಾದ ದೃಶ್ಯಗಳು. ಒಟ್ನಲ್ಲಿ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಸ್ಥಳ.

ಅಂದಹಾಗೆ ಊಟಿಯಲ್ಲಿ ಹೆಚ್ಚಾಗಿ ಶೂಟಿಂಗ್ ಆಗುವುದು ರೊಮ್ಯಾಂಟಿಕ್ ಸೀನ್ ಗಳು ಮತ್ತು ಹಾಡಿನ ದೃಶ್ಯಗಳು. ಆದರೆ ಹಚ್ಚ ಹಸಿರಾದ ಸುಂದರ ಪರಿಸರದಲ್ಲಿ ಕೇವಲ ರೊಮ್ಯಾಂಟಿಕ್ ದೃಶ್ಯಗಳು ಮಾತ್ರವಲ್ಲದೇ, ಆಕ್ಷನ್ ಮತ್ತು ಫೈಟ್ ಸೀನ್ ಗಳನ್ನು ಕ್ಯಾಮಾರ ಕಣ್ಣಲ್ಲಿ ಸೆರೆಹಿಡಿಯಬಹುದು ಎಂದು ನಿರ್ದೇಶಕ ಕೆ.ಎಸ್ ರವಿಕುಮಾರ್ ತೋರಿಸಿಕೊಟ್ಟಿದ್ದಾರೆ.[ರಿಲೀಸ್ ಗೂ ಮುನ್ನ ದಾಖಲೆ ಮೊತ್ತಕ್ಕೆ ಮಾರಾಟವಾದ ಕಿಚ್ಚನ ಚಿತ್ರ]

ಜನವರಿ 4 ರಿಂದ ಕೆ.ಎಸ್ ರವಿಕುಮಾರ್ ಸಾರಥ್ಯದ ಚಿತ್ರತಂಡ, ನಟ ಸುದೀಪ್ ಮತ್ತು ನಿತ್ಯಾ ಮೆನನ್ ಅವರು 'ಮುಡಿಂಜ ಇವನ ಪುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಗಾಗಿ ಊಟಿಯ ಸೋಲೂರು ಕಾಡಿನ ಪೈನ್ ಟ್ರೀಗಳ ನಡುವೆ ಬೀಡು ಬಿಟ್ಟಿದ್ದಾರೆ.

ಸಂಕ್ರಾಂತಿ ಹಬ್ಬ ಇದ್ದರೂ ಕೂಡ ಒಂಚೂರು ಬಿಡುವು ಮಾಡಿಕೊಳ್ಳದೇ ನಟ ಸುದೀಪ್ ಮತ್ತು ನಟಿ ನಿತ್ಯಾ ಮೆನನ್ ಅವರು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಚಿತ್ರತಂಡದೊಂದಿಗೆ ಊಟಿಯ ಸೆಟ್ ನಲ್ಲೆ ಹಬ್ಬ ಕೂಡ ಆಚರಿಸಿಕೊಂಡಿದ್ದಾರೆ.[ಚಿತ್ರಗಳು: ಕಿಚ್ಚನಿಗೆ ಎದುರಾದ ಆ, ಆರು ರೌಡಿಗಳು ಯಾರು?]

ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ 'ಮುಡಿಂಜ ಇವನ ಪುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಆಗಿದ್ದು, ಶೂಟಿಂಗ್ ಸ್ಪಾಟ್ ನ ಸ್ಟಿಲ್ ಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಶೂಟಿಂಗ್ ಸೆಟ್ ನಲ್ಲಿ ಸಂಕ್ರಾಂತಿ

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ 'ಮುಡಿಂಜ ಇವನ ಪುಡಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ಗಾಗಿ ಊಟಿಯಲ್ಲಿ ಬೀಡು ಬಿಟ್ಟಿದ್ದ ಚಿತ್ರತಂಡ ಸಂಭ್ರಮದಿಂದ ಸೆಟ್ ನಲ್ಲಿಯೇ ಸಂಕ್ರಾಂತಿ ಹಬ್ಬವನ್ನು ಆಚರಿಸಿಕೊಂಡರು. ಈ ಸಮಯದಲ್ಲಿ ಸ್ಯಾಂಡಲ್ ವುಡ್ ನ ಟಾಪ್ ವಿಲನ್ ಗಳಾದ ರವಿಶಂಕರ್, ಶರತ್ ಲೋಹಿತಾಶ್ವ, ಮುಖೇಶ್ ತಿವಾರಿ, ನಿಸಾರ್, ನಟ ಸುದೀಪ್, ನಿರ್ಮಾಪಕ ಸೂರಪ್ಪ ಬಾಬು, ನಿರ್ದೇಶಕ ರವಿಕುಮಾರ್ ಮತ್ತು ಇಡೀ ಚಿತ್ರತಂಡ ಪೊಂಗಲ್ ಮಾಡುವ ಮೂಲಕ ಹಬ್ಬ ಆಚರಿಸಿದರು.[ಕಿಚ್ಚ ಸುದೀಪನ ಜೊತೆ ಮೈನಾ ಬೆಡಗಿ ನಿತ್ಯಾ ಮೆನನ್]

ಚಳಿಯಲ್ಲೂ ಫೈಟ್ ಮಾಡಿದ ಸುದೀಪ್

ಊಟಿಯ ತಣ್ಣನೆಯ ವಾತಾವರಣದಲ್ಲಿ ಚಳಿ ಗಾಳಿಯನ್ನೂ ಲೆಕ್ಕಿಸದೆ ನಟಿ ನಿತ್ಯಾ ಮೆನನ್ ಮತ್ತು ಕಿಚ್ಚ ಸುದೀಪ್ ಅವರು ಪೈನ್ ಟ್ರೀ ಮರಗಳ ನಡುವೆ ವಿಲನ್ ಗಳ ಜೊತೆ ಸಖತ್ತಾಗಿ ಫೈಟ್ ಮಾಡಿದ್ದಾರೆ. ಸ್ಟಂಟ್ ಮಾಸ್ಟರ್ ಕನಲ್ ಕಣ್ಣನ್ ಅವರ ನೇತೃತ್ವದಲ್ಲಿ ಈ ಆಕ್ಷನ್ ದೃಶ್ಯಗಳ ಶೂಟಿಂಗ್ ನಡೆಯುತ್ತಿದೆ.

6 ವಿಲನ್ ಗಳ ಜೊತೆ ಸುದೀಪ್ ಫೈಟ್

ಖಳ ನಟ ರವಿಶಂಕರ್, ಶರತ್ ಲೋಹಿತಾಶ್ವ, ಮುಖೇಶ್ ತಿವಾರಿ, ನಿಸಾರ್, ಅವಿನಾಶ್, ಸೇರಿದಂತೆ 70 ಮಂದಿ ಮುಖ್ಯ ಫೈಟರ್ಸ್ ಮತ್ತು 80 ಮಂದಿ ಸಾಹಸ ಕಲಾವಿದರೊಂದಿಗೆ ಕಿಚ್ಚ ಸುದೀಪ್ ಅವರು ಫೈಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ನಿತ್ಯಾ ಮೆನನ್

ಏಳು-ಎಂಟು ಕಡೆ ಬ್ಲಾಸ್ಟ್ ಆಗುವ ಬಾಂಬ್ ಗಳ ನಡುವೆ ತಪ್ಪಿಸಿಕೊಂಡು ಓಡುವ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದು ಒಂದು ರೋಚಕ ಅನುಭವ ಎಂದು ಸುದೀಪ್ ತಿಳಿಸಿದ್ದಾರೆ. ಸುಮಾರು 14 ದಿನಗಳಿಂದ 360 ಮಂದಿ ಇರುವ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯಲಾಗುತ್ತಿದೆ.

ನಿರ್ಮಾಪಕರು ಮತ್ತು ನಿರ್ದೇಶಕರ ನಡುವೆ ಕಿಚ್ಚ

ನಿರ್ಮಾಪಕ ಸೂರಪ್ಪ ಬಾಬು ಮತ್ತು ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ ನಡುವೆ ನಿಂತಿರುವ ನಟ ಕಿಚ್ಚ ಸುದೀಪ್. ತಮಿಳಿನಲ್ಲಿ ಖ್ಯಾತ ನಿರ್ದೇಶಕ ಎಂದೇ ಖ್ಯಾತಿ ಗಳಿಸಿರುವ ನಿರ್ದೇಶಕ ರವಿಕುಮಾರ್ ಅವರು ಇದೇ ಮೊದಲ ಬಾರಿಗೆ ತಮಿಳಿನ ಜೊತೆಗೆ ಕನ್ನಡ ಚಿತ್ರಕ್ಕೂ ಆಕ್ಷನ್-ಕಟ್ ಹೇಳುತ್ತಿದ್ದಾರೆ.

ಹೊಚ್ಚ ಹೊಸ ಪೋಸ್ಟರ್

ತಮಿಳು ವರ್ಷನ್ 'ಮುಡಿಂಜ ಇವನ ಪುಡಿ' ಚಿತ್ರದ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ನಲ್ಲಿ ಸುದೀಪ್ ಅವರು ಸಖತ್ ಕ್ಲಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ತಲೆಗೊಂದು ಹ್ಯಾಟ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಮಿಂಚುತ್ತಿರುವ ಸುದೀಪ್ ಫೋಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಜನವರಿ 20ಕ್ಕೆ ಚಿತ್ರದ ಕಂಪ್ಲೀಟ್ ಶೂಟಿಂಗ್ ಕೊನೆಗೊಳ್ಳಲಿದೆ.

English summary
Kannada Actor sudeep is all excited about the release of 'Mudinja Ivana Pudi'. The actor is all confident that this Rambabu Productions will end up as a good hit. The movie is directed by K.S Ravikumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada