»   » 'ಕರಿಯ 2' ಹಾಗೂ 'ಕಟಕ' ಪೈಪೋಟಿಯಲ್ಲಿ ಗೆಲುವವರು ಯಾರು..?

'ಕರಿಯ 2' ಹಾಗೂ 'ಕಟಕ' ಪೈಪೋಟಿಯಲ್ಲಿ ಗೆಲುವವರು ಯಾರು..?

Posted By:
Subscribe to Filmibeat Kannada

ಈ ವಾರ ಕನ್ನಡದಲ್ಲಿ ಎರಡು ಸಿನಿಮಾಗಳು ಬಿಡುಗಡೆಯಾಗಲಿದೆ. ಒಂದು ಕಡೆ 'ಕರಿಯ 2' ಮತ್ತು ಇನ್ನೊಂದು ಕಡೆ 'ಕಟಕ' ಸಿನಿಮಾ ನಾಳೆ ರಾಜ್ಯಾದಂತ್ಯ ತೆರೆಗೆ ಬರುವುದಕ್ಕೆ ಸಜ್ಜಾಗಿವೆ.

'ಕರಿಯ 2' ಒಂದು ಪಕ್ಕಾ ಮಾಸ್ ಸಿನಿಮಾ ಆಗಿದೆ. ದರ್ಶನ್ ಅಭಿನಯದ 'ಕರಿಯ' ನಂತರ ಈಗ ಮತ್ತೆ ಅದೇ ಹೆಸರಿನಲ್ಲಿ ಸಿನಿಮಾ ಬರುತ್ತಿದ್ದು, ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಜೊತೆಗೆ 'ಕಟಕ' ಸಿನಿಮಾ ವಾಮಾಚಾರದ ಸುತ್ತ ನಡೆಯುವ ಕಥೆಯಾಗಿದ್ದು, ಇದೊಂದು ಹಾರರ್ ಚಿತ್ರವಾಗಿದೆ. ಅಂದಹಾಗೆ, ನಾಳೆ ಬಿಡುಗಡೆಯಾಗುತ್ತಿರುವ ಈ ಎರಡು ಸಿನಿಮಾಗಳ ಬಗ್ಗೆ ಒಂದಷ್ಟು ವಿವರ ಮುಂದಿದೆ ಓದಿ...

'ಕರಿಯ 2'

'ಕರಿಯ 2' ಸಿನಿಮಾ ಅಕ್ಟೋಬರ್ 13ಕ್ಕೆ ಅಂದರೆ ನಾಳೆ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಕರಿಯನಾಗಿ 'ಗಣಪ' ಖ್ಯಾತಿಯ ನಟ ಸಂತೋಷ್ ಕಾಣಿಸಿಕೊಂಡಿದ್ದಾರೆ. ಮಯೂರಿ ಚಿತ್ರದ ನಾಯಕಿಯಾಗಿದ್ದಾರೆ. ಸಿನಿಮಾವನ್ನು ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡಿದ್ದು, ದರ್ಶನ್ ಅವರ 'ಕರಿಯ' ಚಿತ್ರವನ್ನು ನಿರ್ಮಾಣ ಮಾಡಿದ್ದ ಆನೇಕಲ್ ಬಾಲರಾಜ್ ಅವರೇ ಈ ಚಿತ್ರಕ್ಕೂ ಹಣ ಹಾಕಿದ್ದಾರೆ.

ಸಖತ್ ಬೇಡಿಕೆ ಇದೆ

'ಕರಿಯ 2' ಸಿನಿಮಾಗೆ ಈಗಾಗಲೇ ದೊಡ್ಡ ಬೇಡಿಕೆ ಹುಟ್ಟಿಕೊಂಡಿದೆ. ಚಿತ್ರ ಕೊರಿಯಾ ಭಾಷೆಗೆ ರೀಮೇಕ್, ಹಿಂದಿ ಮತ್ತು ಮರಾಠಿಗೆ ಡಬ್ ಆಗುತ್ತಿದೆ. ಮತ್ತೊಂದೆಡೆ ತಮಿಳು ಮತ್ತು ತೆಲುಗಿನಲ್ಲೂ 'ಕರಿಯ-2' ಚಿತ್ರವನ್ನು ರೀಮೇಕ್ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ತ್ರೀವೇಣಿ ಚಿತ್ರಮಂದಿರ 'ಕರಿಯ 2' ಚಿತ್ರದ ಮುಖ್ಯ ಚಿತ್ರಮಂದಿರವಾಗಿದೆ.

ಸ್ಯಾಂಡಲ್ ವುಡ್ ಆಚೆ ಬೇಡಿಕೆ ಹೆಚ್ಚಿಸಿಕೊಂಡ 'ಕರಿಯ'.!

'ಕಟಕ'

'ಕಟಕ' ಸಿನಿಮಾ ನಾಳೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. 'ಉಗ್ರಂ' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ 'ಕಟಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಾಮಾಚಾರದ ಸುತ್ತ ನಡೆಯುವ ಕಥೆ ಸಿನಿಮಾದಲ್ಲಿದ್ದು, ಇದೊಂದು ಹಾರರ್ ಚಿತ್ರವಾಗಿದೆ. ಐದು ವರ್ಷದ ಬಾಲಕಿ ಮೇಲೆ ವಾಮಾಚಾರ ಪ್ರಯೋಗವಾಗಿ ಮುಂದೆ ಅದು ಏನೆಲ್ಲ ಆಗುತ್ತದೆ ಎನ್ನುವುದು ಸಿನಿಮಾದ ಕಥೆ.

13 ಭಾಷೆಗಳಲ್ಲಿ ಟ್ರೇಲರ್ ಬಂದಿತ್ತು

'ಕಟಕ' ಸಿನಿಮಾದ ಟ್ರೇಲರ್ ಬರೋಬ್ಬರಿ 13 ಭಾಷೆಗಳಲ್ಲಿ ಬಂದಿತ್ತು. ಪುನೀತ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಸಿನಿಮಾದ ಸೌಂಡಿಂಗ್ ಗೆ ತುಂಬ ಪ್ರಾಮುಖ್ಯತೆ ನೀಡಿದ್ದು, ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡಿದ್ದಾರಂತೆ. ಅಂದಹಾಗೆ, ಚಿತ್ರದಲ್ಲಿ ನಟ ಅಶೋಕ್ ಮತ್ತು ಬಾಲ ನಟಿ ಶ್ಲಾಘ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ನಿಮ್ಮ ಆಯ್ಕೆ ಯಾವುದು..?

ಈ ಎರಡು ಚಿತ್ರಗಳು ಪೈಕಿ ಈ ವಾರ ನೀವು ನೋಡಲು ಬಯಸಿದ ಸಿನಿಮಾ ಯಾವುದು..? ಎಂಬುದನ್ನು ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.

English summary
'kataka' and 'kariya 2' Kannada movies releasing on october 13th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada