Don't Miss!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದಾಖಲೆ ಬೆಲೆಗೆ ಸಂಗೊಳ್ಳಿ ರಾಯಣ್ಣ ಟಿವಿ ರೈಟ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ದೊಡ್ಡ ಬಜೆಟ್ ಐತಿಹಾಸಿಕ ಚಿತ್ರ 'ಸಂಗೊಳ್ಳಿ ರಾಯಣ್ಣ' ಸೆಟ್ಟೇರಿದ ದಿನದಿಂದಲೂ ಜೋರಾಗಿ ಸುದ್ದಿ ಮಾಡುತ್ತಿದೆ. ಬರೀ ಸುದ್ದಿಯಲ್ಲ, ಕನ್ನಡ ಚಿತ್ರರಂಗದ ದಾಖಲೆಗಳೆಲ್ಲವನ್ನೂ ಚಿಂದಿ ಚಿತ್ರಾನ್ನ ಮಾಡುವತ್ತ ದಾಪುಗಾಲಿಟ್ಟು ಹೊರಟಿದೆ. ಬಿಗ್ ಬಜೆಟ್, ಅದ್ದೂರಿ ತಾರಾಗಣ ಹೊಂದಿರುವ ಈ ಚಿತ್ರವನ್ನು ಹಿರಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿದ್ದಾರೆ.
ಇದೀಗ ದಾಖಲೆಪಟ್ಟಿಗೆ ಸೇರ್ಪಡೆಯಾಗಿರುವುದು ಸೆಟಲೈಟ್ ಹಕ್ಕು. ಸಂಗೊಳ್ಳಿ ರಾಯಣ್ಣ ಚಿತ್ರ ಬರೋಬ್ಬರಿ ಆರು ಕೋಟಿ ರೂಪಾಯಿಗಳ ಟಿವಿ ಹಕ್ಕು ಪಡೆದುಕೊಂಡಿದೆ. ಈ ಮೊತ್ತವನ್ನು ಸಾಕಷ್ಟು ಅಳೆದು, ತೂಗಿ ಕೊಟ್ಟಿ ಖರೀದಿಸಿರುವುದು ಉದಯ ಟಿವಿ. ಈಗಾಗಲೇ ಚಿತ್ರೀಕರಣ ಮುಗಿದಿದೆ, ಬಾಕಿ ಇರುವುದು ಬಿಡುಗಡೆ ಮಾತ್ರ. ದರ್ಶನ್ ಜೊತೆ ನಾಯಕಿಯಾಗಿ ನಿಖಿತಾ ನಟಿಸಿದ್ದಾರೆ.
ಬರೋಬ್ಬರಿ 30 ಕೋಟಿ ರೂಪಾಯಿಯನ್ನು ಸುರಿದು ತಯಾರಿಸಲಾಗಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕರ ಗತಿಯೇನು ಎಂದು ಗಾಂದಿನಗರದಲ್ಲಿ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಕಾರಣ, ಇದು ಐತಿಹಾಸಿಕ ಚಿತ್ರ ಎನ್ನುವುದು ಒಂದಾದರೆ ಇದನ್ನು ನೋಡುವವರು ಕಡಿಮೆ ಎಂಬುದು ಎರಡನೆಯದು. ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗುತ್ತಿರುವುದೂ ಮತ್ತೊಂದು ಕಾರಣ. ಮುಂದಿನ ಪುಟ ನೋಡಿ...