For Quick Alerts
  ALLOW NOTIFICATIONS  
  For Daily Alerts

  ಕುಂಬಳಕಾಯಿ ಒಡೆಸಿಕೊಂಡ 'ಸಂಗೊಳ್ಳಿರಾಯಣ್ಣ'

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ ಐತಿಹಾಸಿಕ ಅದ್ದೂರಿ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. ಇತ್ತೀಚೆಗೆ ಈ ಚಿತ್ರದ ಚಿತ್ರೀಕಣವೂ ಅದ್ದೂರಿಯಾಗಿ ಮುಕ್ತಾಯವಾಯಿತು. ಬೆಂಗಳೂರು ಅರಮನೆ ಮೈದಾನದಲ್ಲಿ ಕೊನೆಯ ದೃಶ್ಯವೊಂದನ್ನು ಸೆರೆಹಿಡಿಯುವ ಮೂಲಕ 'ಸಂಗೊಳ್ಳಿ ರಾಯಣ್ಣ'ನಿಗೆ ಕುಂಬಳಕಾಯಿ ಒಡೆಯಲಾಯಿತು.

  ಈ ಚಿತ್ರದ ಸಂಕಲನ ಕಾರ್ಯ ಮುಗಿದಿದ್ದು ದರ್ಶನ್ ಅವರ ಡಬ್ಬಿಂಗ್ ಕೆಲಸ ಬಾಕಿ ಉಳಿದಿದೆ. ಸದ್ಯಕ್ಕೆ ಗ್ರಾಫಿಕ್ಸ್ ಹಾಗೂ ಡಿಐ ಅಳವಡಿಕೆ ಕೆಲಸ ಭರದಿಂದ ಸಾಗುತ್ತಿದೆ. ಆಗಸ್ಟ್ 15ರಂದು ಚಿತ್ರವನ್ನು ತೆರೆಗೆ ತರಬೇಕೆಂಬ ಸಂಕಲ್ಪವನ್ನು ನಿರ್ಮಾಪಕ ಆನಂದ್ ಅಪ್ಪುಗೋಳ್ ಮಾಡಿದ್ದಾರೆ. ಅಂದು ಸಂಗೊಳ್ಳಿ ರಾಯಣ್ಣನ ಹುಟ್ಟುಹಬ್ಬವೂ ಹೌದು

  ಹೈದರಾಬಾದ್, ಮೈಸೂರು, ಕೊಡಗು, ಜೈಪುರ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ 'ರಾಯಣ್ಣ'ನ ಚಿತ್ರೀಕರಣ ನಡೆದಿದೆ. ರಮೇಶ್ ಭಟ್, ಅವಿನಾಶ್, ಶಶಿಕುಮಾರ್, ಶಿವಕುಮಾರ್ ಮತ್ತು ಜಯಪ್ರದಾ ಚಿತ್ರದ ತಾರಾಬಳಗದಲ್ಲಿದ್ದಾರೆ. ನಾಗಣ್ಣ ನಿರ್ದೇಶನದ ಈ ಚಿತ್ರ ದರ್ಶನ್ ಅವರ ವೃತ್ತಿ ಜೀವನದಲ್ಲಿ 'ಸಂಗೊಳ್ಳಿ ರಾಯಣ್ಣ' ಮತ್ತೊಂದು ತಿರುವು ನೀಡಲಿದೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. (ಒನ್‌ಇಂಡಿಯಾ ಕನ್ನಡ)

  English summary
  Challenging Star Darshan lead mega budget Kannada film Krantiveera Sangolli Rayanna has finally wrapped up the entire shooting part after the last schedule being shot in Bangalore. The post-production works are in progress and the producers of the film are aiming for 15th August release, on the eve of Independence Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X