»   » ಗೂಸಾ ತಿಂದು ಚೇತರಿಸಿಕೊಂಡ ದುನಿಯಾ ವಿಜಯ್

ಗೂಸಾ ತಿಂದು ಚೇತರಿಸಿಕೊಂಡ ದುನಿಯಾ ವಿಜಯ್

Posted By:
Subscribe to Filmibeat Kannada

ತನ್ನ ಹಳೆ ಗೆಳೆಯರಿಂದ ಗೂಸಾ ತಿಂದು ಆಸ್ಪತ್ರೆ ಸೇರಿದ್ದ ನಟ ದುನಿಯಾ ವಿಜಯ್ ಚೇತರಿಸಿಕೊಂಡಿದ್ದಾರೆ. ಜೂನ್.27ರಂದು ಸೃಜನ್ ಲೋಕೇಶ್ ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ದುನಿಯಾ ವಿಜಯ್ ಮೇಲೆ ಹಲ್ಲೆ ನಡೆದಿತ್ತು. ಕಂಠಪೂರ್ತಿ ಕುಡಿದಿದ್ದ ದುನಿಯಾ ವಿಜಯ್ ಅವರನ್ನು ಹಿಗ್ಗಾಮುಗ್ಗಾ ಹೊಡೆದಿದ್ದರು ಎನ್ನುತ್ತವೆ ಮೂಲಗಳು.

ತಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲವೆಂದು ವಿಜಯ್ ಹೇಳಿಕೊಂಡಿದ್ದರು. ಹಳೆಯ ಗೆಳೆಯರಾಗಲಿ ಅಥವಾ ಯಾವುದೇ ರಿಯಲ್ ಫೈಟಿಂಗ್ ನಡೆದಿಲ್ಲ. ಇದೆಲ್ಲ ಕಟ್ಟಕತೆ ಅಷ್ಟೆ ಎಂದು ದುನಿಯಾ ವಿಜಯ್ ವಿವರ ನೀಡಿದ್ದರು. ಕಾರ್ಯಕ್ರಮದಲ್ಲಿದ್ದದ್ದು ನಿಜ. ಮಾತಿನ ಚಕಮಕಿ ನಡೆದದ್ದು ಅಷ್ಟೆ ಸತ್ಯ. ಆದರೆ ಹೊಡೆದಾಟ ನಡೆದದ್ದು ಮಾತ್ರ ಸತ್ಯಕ್ಕೆ ದೂರವಾದ ಮಾತು ಎಂದಿದ್ದರು.

ವಿಜಯ್ ಆಗಿನ್ನು ಹೀರೋ ಆಗಿರಲಿಲ್ಲ. ನಟನೊಬ್ಬನ ಜೊತೆ ಇದ್ದ. ಆ ನಟನ ಹೊಸ ಚಿತ್ರ ಬಿಡುಗಡೆಯಾಗಿದ್ದಾಗ ವಿಜಯ್ ಕುಡಿದು ಗಲಾಟೆ ಮಾಡಿದ್ದ. ಆಗ ಆ ನಟನ ಗೆಳೆಯರು ವಿಜಯ್ ಮೇಲೆ ಕೈ ಮಾಡಿದ್ದರಂತೆ. ಅದೇ ಗೆಳೆಯರು ಸೃಜನ್ ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡಾಗ ವಿಜಯ್ ಪಿತ್ತ ನೆತ್ತಿಗೇರಿದೆ. ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada