»   »  ಯಾರದು ಚಿತ್ರದಲ್ಲಿ ಮೇರಿಯಾಗಿ ಲೀಲಾವತಿ

ಯಾರದು ಚಿತ್ರದಲ್ಲಿ ಮೇರಿಯಾಗಿ ಲೀಲಾವತಿ

By: *ಚಿತ್ರಜೀವಿ
Subscribe to Filmibeat Kannada
Leelavati faces camera in Yaaradu
ಬಹಳ ದಿನಗಳ ನಂತರ ಡಾ.ಲೀಲಾವತಿ ನಟನೆಗೆ ಮರಳಿದ್ದಾರೆ. ವಿನೋದ್ ರಾಜ್ ಅವರ 'ಯಾರದು' ಚಿತ್ರದಲ್ಲಿ ಮೇರಿ ಎಂಬ ಆಂಗ್ಲೊ ಇಂಡಿಯನ್ ಪಾತ್ರವೊಂದನ್ನು ಅವರು ಪೋಷಿಸುತ್ತಿದ್ದಾರೆ. ಈ ವಯಸ್ಸಿನಲ್ಲೂ ತಾವು ನಟಿಸಲು ನನ್ನ ಪ್ರೇಕ್ಷಕರೇ ನನಗೆ ಸ್ಫೂರ್ತಿ ಎನ್ನುತ್ತಾರೆ ಲೀಲಾವತಿ.

ಚಿತ್ರದ ಶೀರ್ಷಿಕೆಯನ್ನು (ಯಾರದು?) ಬಹಳ ಹಿಂದೆಯೇ ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಯಾವುದೆ ಅನುಮಾನ ಬೇಡ. ಇದು ವಿವಾದವಾಗುವುದು ತಮಗೆ ಇಷ್ಟವಿಲ್ಲ ಎಂದು ಲೀಲಾವತಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಅವರ ಮೇಲೆ ನಡೆದ ದಾಳಿಯಿಂದ ಅವರು ಕೊಂಚ ಖಿನ್ನರಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸತ್ಯ ಯಾವತ್ತಿದ್ದರೂ ಗೆದ್ದೇ ಗೆಲ್ಲುತ್ತದೆ, ಸತ್ಯಕ್ಕೆ ಸಾವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ದೊಡ್ಡ ಬ್ಯಾನರ್ ನ ಚಿತ್ರಗಳು ನನ್ನ ಮಗನನ್ನು ಹುಡುಕಿಕೊಂಡು ಬರುತ್ತವೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ. ಕಾರಣ ಚಿತ್ರೋದ್ಯಮದಲ್ಲಿನ ರಾಜಕೀಯ. ಹೊಸ ಪೀಳಿಗೆಯ ನಟರು ನೋಡಲು ಚೆನ್ನಾಗಿಯೇ ಇದ್ದಾರೆ, ಅವರು ನಟನಾ ಕೌಶಲ್ಯ ಒಂಚೂರು ಸುಧಾರಿಸಿಕೊಂಡರೆ ಉತ್ತಮ ಎಂದರು.

ತಾವು ಚಿತ್ರರಂಕ್ಕೆ ಅಡಿಯಿಟ್ಟಾಗ ಬಣ್ಣದ ಬದುಕು ಕೇವಲ ಹೊಟ್ಟೆಪಾಡಿನ ವೃತ್ತಿಯಾಗಿತ್ತು.ಆಗಿನ್ನೂ ಈ ವೃತ್ತಿಗೆ ಗ್ಲಾಮರಸ್ ಮೆರುಗು ಬಂದಿರಲಿಲ್ಲ.ಉತ್ತಮ ಚಿತ್ರಕತೆ,ನಿರ್ದೇಶಕರೊಂದಿಗೆ ನಾವು ಚಿತ್ರ ನಿರ್ಮಿಸುವಷ್ಟು ಶಕ್ತರಾಗಿದ್ದೇವೆ. ಸಾವಿರ ಜನರ ಮುಂದೆ ನಟಿಸಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಆದರೆ ಸಾರ್ವಜನಿಕ ಭಾಷಣ ಬಿಗಿ ಎಂದರೆ ಅದು ಆಗದ ಮಾತು ಲೀಲಾವತಿ ಮಾತಿಗೆ ವಿರಾಮ ಕೊಟ್ಟರು.


ಸದ್ದಿಲ್ಲದ ಸಮಾಜ ಸೇವಕಿ ನಟಿ ಲೀಲಾವತಿ
ಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada