»   » ಉಪೇಂದ್ರ ಆರಕ್ಷಕ ಚಿತ್ರ ಬಿಡುಗಡೆಗೆ ಕ್ಷಣಗಣನೆ

ಉಪೇಂದ್ರ ಆರಕ್ಷಕ ಚಿತ್ರ ಬಿಡುಗಡೆಗೆ ಕ್ಷಣಗಣನೆ

Posted By:
Subscribe to Filmibeat Kannada

ಸೂಪರ್ ಸ್ಟಾರ್ ಉಪೇಂದ್ರ ನಾಯಕತ್ವದ ಬಹುನಿರೀಕ್ಷಿತ ಚಿತ್ರ 'ಆರಕ್ಷಕ' ಮುಂದಿನ ವಾರ, ಜನವರಿ 26, 2012 ಕ್ಕೆ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಈ ಮೊದಲೇ ಬಿಡುಗಡೆಯನ್ನು ಘೋಷಿಸಿದ್ದರೂ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಕಾರಣ ಆರಕ್ಷಕ ಚಿತ್ರ ಬಿಡುಗಡೆ ಆಗಬೇಕಾಗಿರುವ ಸಾಗರ್ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಶೈಲೂ.

ಆದರೆ ಇದೀಗ ಶೈಲೂ ಕಥೆ ಏನಾಗುದೆಯೋ! ಅಲ್ಲಿ ಆರಕ್ಷಕ ಬರುವುದು ಪಕ್ಕಾ ಆಗಿದೆ. ಈಗಾಗಲೇ ಚಿತ್ರತಂಡ ಜಾಹೀರಾತು ನೀಡಿದೆ ಹಾಗೂ ದರ್ಶನ್ ಚಿಂಗಾರಿ ಚಿತ್ರ ಬಿಡುಗಡೆ ಕೂಡ ಮುಂದಕ್ಕೆ ಹೋಗಿದೆ. ಗಣರಾಜ್ಯೋತ್ಸವದ ದಿನ ಆರಕ್ಷಕ ಪ್ರತ್ಯಕ್ಷ ಆಗಲಿದ್ದಾನೆ. ಬಹುದಿನಗಳಿಂದ ತೆರೆಯಮೇಲೆ ಬಾರದ ಉಪೇಂದ್ರ ದ್ವಿಪಾತ್ರದ ಮೂಲಕ ಬರುತ್ತಿದ್ದಾರೆ.

25 ಅಡಿ ಉದ್ದ ಹಾಗೂ 10 ಅಡಿ ಅಗಲವಿರುವ ಬಾಟಲ್ ನೊಳಕ್ಕೆ ಉಪೇಂದ್ರ ಭಾವಚಿತ್ರವಿರಿಸಿ ಸಾಗರ್ ಚಿತ್ರಮಂದಿರದ ಮುಂದೆ ನಿಲ್ಲಿಸುವುದಾಗಿ ನಿರ್ಮಾಪಕ ಕೃಷ್ಣ ಪ್ರಜ್ವಲ್ ಹೇಳಿದ್ದಾರೆ. ಅದ್ಯಾಕೋ ಉಪೇಂದ್ರರನ್ನು ಬಾಟಲಿಯಲ್ಲಿ ಬಚ್ಚಿಡುತ್ತಾರೋ ಗೊತ್ತಿಲ್ಲ!

ಆರಕ್ಷಕ ಚಿತ್ರಕ್ಕೆ ಪಿ ವಾಸು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೆಶನವಿದೆ. ನಾಯಕಿಯರಾಗಿ ಸದಾ ಮತ್ತು ಗ್ಲಾಮರ್ ರಾಣಿ ರಾಗಿಣಿ ಇದ್ದಾರೆ. ಒಟ್ಟಿನಲ್ಲಿ ಸೂಪರ್ ನಂತರ ಉಪೇಂದ್ರ ಅಭಿಮಾನಿಗಳಿಗೆ ಸಂತಸದ ಸುದ್ದಿ. (ಒನ್ ಇಂಡಿಯಾ ಕನ್ನಡ)

English summary
Upendra Movie Arakshaka releases on Jan 26 2012 all over Karnataka. P Vasu Directed this movie. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada