»   » ಬಿಬಿಎಂಪಿ ಚುನಾವಣಾ ಕಣಕ್ಕೆ ನಟಿ ಶಾಂತಲಾ

ಬಿಬಿಎಂಪಿ ಚುನಾವಣಾ ಕಣಕ್ಕೆ ನಟಿ ಶಾಂತಲಾ

Posted By:
Subscribe to Filmibeat Kannada
Actress Shantala to contest in BBMP Polls
ಬಹುಶಃ ಈ ನಟಿಯನ್ನು ಕನ್ನಡ ಪ್ರೇಕ್ಷಕರು ಮರೆತೆ ಹೋಗಿತ್ತಾರೆ. 'ಪಡುವಾರಹಳ್ಳಿ ಪಾಂಡವರು' ಚಿತ್ರದಲ್ಲಿನ ''ಏಸು ವರ್ಷ ಆಯ್ತೆ ನಿಂಗೆ ನನ್ನ ಬಂಗಾರಿ...''ಎಂಬ ಹಾಡು ನೆನಪಿದ್ದರೆ ಎಂ ಎಸ್ ಶಾಂತಲಾ ಎಂಬ ಈ ಚಿರಯೌವ್ವನೆ ಸಹ ನೆನಪಾಗುತ್ತಾರೆ. ಈಗ ಈಕೆಯನ್ನು ಮತ್ತೊಮ್ಮೆ ನೆನಪಿಸಲು ಕಾರಣ ಶಾಂತಲಾ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಕಣಕ್ಕಿಳಿದಿದ್ದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಮೊದಲು ನಾಯಕಿಯಾಗಿ 'ಪಡುವಾರಹಳ್ಳಿ ಪಾಂಡವರು' ಚಿತ್ರದಲ್ಲಿ ಅಭಿನಯಿಸಿದ ಕಲಾವಿದೆ ಶಾಂತಲಾ. ಈಕೆ ಅಭಿನಯಿಸಿದ ಏಕೈಕ ಚಿತ್ರ ಸಹ ಅದಾಗಿತ್ತು. ಇದೀಗ ಗಿರಿನಗರ ವಾರ್ಡ್ ನ ಜೆಡಿಎಸ್ ಅಭ್ಯರ್ಥಿಯಾಗಿ ಶಾಂತಲಾ ಕಣಕ್ಕಿಳಿದಿದ್ದಾರೆ.

ಚಿತ್ರರಂಗದಿಂದ ಬಹಳ ದೂರ ಸರಿದಿದ್ದ ಅವರು ಸಿ ಆರ್ ಸಿಂಹ ಅವರ ರಸಋಷಿ ಚಿತ್ರಕ್ಕೆ ಮತ್ತೆ ಬಣ್ಣ ಹಚ್ಚಿಕೊಂಡಿದ್ದರು. ಚಿತ್ರರಂಗದಿಂದ ದೂರವಾಗಿದ್ದರೂ ಬಣ್ಣದ ಲೋಕದೊಂದಿಗೆ ಅವರಿಗೆ ನಂಟು ಇದ್ದೆ ಇದೆ. ರಂಗಭೂಮಿಯಲ್ಲಿ ಸದಾ ತೊಡಗಿಕೊಂಡಿರುವ ಅವರು ಪ್ರಭಾತ್ ತಂಡದಲ್ಲಿ ಸಕ್ರಿಯರಾಗಿದ್ದಾರೆ.

ಸಮಾಜಸೇವೆಯ ಕನಸು ಕಟ್ಟಿರುವ ಅವರು ಇದೀಗ ನಾಗರೀಕರ ಸೇವೆ ಮಾಡಬೇಕು ಎಂಬ ಹಂಬಲದಿಂದ ಚುನಾವಣೆಗೆ ಧುಮುಕಿದ್ದಾರೆ. 'ರಸಋಷಿ' ಚಿತ್ರಕ್ಕಾಗಿ ಬಿಳಿ ವಿಗ್ ತೊಟ್ಟು ಅವರು ಅಜ್ಜಿಯಂತೆ ಕಾಣುತ್ತಿದ್ದರೂ ನಿಜಕ್ಕೂ ಅವರಿಗೆ ಅಷ್ಟು ವಯಸ್ಸಾಗಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada