»   »  ಏಡ್ಸ್ ಪೀಡಿತನೊಬ್ಬನ ಕೊನೆಯ 22 ದಿನಗಳು

ಏಡ್ಸ್ ಪೀಡಿತನೊಬ್ಬನ ಕೊನೆಯ 22 ದಿನಗಳು

Subscribe to Filmibeat Kannada

ಏಡ್ಸ್ ಪೀಡಿತನೊಬ್ಬನ ಕೊನೆಯ 22 ದಿನಗಳ ತೊಳಲಾಟವನ್ನು 22 ನಿಮಿಷದಲ್ಲಿ ತೋರಿಸುವ ಕಿರುಚಿತ್ರ ಪ್ರದರ್ಶನ ಮಾ.21ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮಲ್ಲೇಶ್ವರದ ರಿಜಯ್ಸ್ ಪ್ರಿವ್ಯೂ ಚಿತ್ರಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರದರ್ಶನ.

ಈ ಕಿರುಚಿತ್ರವನ್ನು ತರುಣ ನಿರ್ದೇಶಕ ರವೀಂದ್ರ ಸಿದ್ಧಗೊಳಿಸಿದ್ದಾರೆ.ಏಡ್ಸ್ ರೋಗ ಪತ್ತೆಯಾದ ತಕ್ಷಣವೇ ಗೆಳೆಯರು, ಪ್ರಿಯತಮೆ, ಸಂಬಂಧಿಕರು ಎಲ್ಲರೂ ರೋಗ ಪೀಡಿತನಿಂದ ದೂರವಾಗುತ್ತಾರೆ. ಹೀಗೆ ಸಮಾಜದಿಂದ ಬಹಿಷ್ಕೃತನಾದ ನಾಯಕ ಆತ್ಮಹತ್ಯೆಯ ಬಗ್ಗೆ ಆಲೋಚಿಸುವ ಹಂತಕ್ಕೆ ತಲುಪುತ್ತಾನೆ.ಈ ಸ್ಥಿತಿಯಲ್ಲಿ ರೋಗಿಯ ಮನಸ್ಥಿತಿ ಬಿಚ್ಚಿಡುವ ಯತ್ನ ಈ ಕಿರುಚಿತ್ರದಲ್ಲಿದೆ.

ರಾಜ್ಯದ ಇತರ ಊರುಗಳಲ್ಲಿ, ಶಾಲಾಕಾಲೇಜುಗಳಲ್ಲಿ ಈ ಕಿರುಚಿತ್ರವನ್ನು ಪ್ರದರ್ಶಿಸಬೇಕು ಎಂಬುದು ಚಿತ್ರತಂಡದ ಉದ್ದೇಶ. ಚಿತ್ರವನ್ನು ರು.80 ಸಾವಿರದಲ್ಲಿ ನಿರ್ಮಿಸಲಾಗಿದೆ. ರಾಜ್ಯ ಪ್ರಶಸ್ತಿ ಪಡೆದ ತುಳುಚಿತ್ರ 'ಬಿರ್ಸೆ'ಯ ನಾಯಕಿ ಸಹನಾಶ್ರೀ ಅಭಿನಯಿಸಿದ್ದಾರೆ. ಅಶ್ವಿನ್ ರಮೇಶ್ ಚಿತ್ರದ ನಾಯಕ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದೂ ಓದಿ
ನನ್ನ ಮೊದಲ ಹೆಜ್ಜೆಯ ಗುರುತು ಸೂರ್ಯಾಸ್ತ
ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಗಣೇಶ್!
ಕೈದಿಗಳ ಹೃದಯ ಕದ್ದ ದುನಿಯಾ ವಿಜಯ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada