»   » ಲಿಫ್ಟ್ ಕೊಡ್ಲಾ ಎನ್ನಲು ಬಂದ ಅರ್ಚನಾ

ಲಿಫ್ಟ್ ಕೊಡ್ಲಾ ಎನ್ನಲು ಬಂದ ಅರ್ಚನಾ

Posted By:
Subscribe to Filmibeat Kannada

ಸಿ ಎಂ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಲಿಫ್ಟ್ ಕೊಡ್ಲಾ' ಚಿತ್ರದ ನಾಯಕಿಯಾಗಿ ಅರ್ಚನಾಗುಪ್ತಾ ಆಯ್ಕೆಯಾಗಿದ್ದಾರೆ ಎಂದು ನಿರ್ಮಾಪಕ ಸಿ ಎಂ ಆರ್ ಶಂಕರ್‌ರೆಡ್ಡಿ ತಿಳಿಸಿದ್ದಾರೆ. ಅರ್ಚನಾಗುಪ್ತಾ ಹಿಂದೆ ಗಣೇಶ್ ಅಭಿನಯದ ಸರ್ಕಸ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

ಶ್ರೀಮತಿ ಸಬೀತ ಕೆ.ಸಿ.ರಾಮಮೂರ್ತಿ ಅರ್ಪಿಸಿ, ಅಶೋಕ್ ಕಶ್ಯಪ್ ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಇದೇ ತಿಂಗಳ ಕೊನೆಗೆ ಆರಂಭವಾಗಲಿದ್ದು, ಬೆಂಗಳೂರು ಹಾಗೂ ಮಲೆನಾಡಿನ ಸುಂದರ ಸ್ಥಳಗಳಲ್ಲಿ ಈ ಹಂತದ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ ನಿರ್ದೇಶಕರು.

ನವರಸ ನಾಯಕ ಜಗ್ಗೇಶ್ ಹಾಗೂ ಕೋಮಲ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಸಚಿವರಾದ ಕಟ್ಟಾಸುಬ್ರಹ್ಮಣ್ಯನಾಯ್ಡು ಗೃಹಮಂತ್ರಿಯ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಒಂದು ದಿನದ ಚಿತ್ರೀಕರಣ ಮುಗಿಸಿರುವ ಸಚಿವರು ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡುತ್ತೇನೆ' ಎಂದು ಹೇಳಿದ್ದಾರೆ.

ತಾಂತ್ರಿಕ ವರ್ಗ:
ಸ್ವರ್ಗಕ್ಕೆ ಮೂರೇ ಗೇಣು ಎಂಬ ಅಡಿಬರಹ ಈ ಚಿತ್ರಕ್ಕಿದೆ. ವಿ.ಮನೋಹರ್ ಸಂಗೀತ, ರಾಂನಾರಾಯಣ್ ಸಂಭಾಷಣೆ, ಅಶೋಕ್ ಕಶ್ಯಪ್ ಛಾಯಾಗ್ರಹಣ, ಉದಯರವಿ ಹೆಗ್ಡೆ ಸಂಕಲನ, ಭಾವಾ ಕಲಾ ನಿರ್ದೇಶನ, ಜಾಲಿಬಾಸ್ಟಿನ್ ಸಾಹಸ ಹಾಗೂ ದೇವಾನಂದ್ ನೃತ್ಯ ಸಂಯೋಜನೆಯಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada