For Quick Alerts
  ALLOW NOTIFICATIONS  
  For Daily Alerts

  ಗೋವಿಂದಾಯ ನಮಃ ಮತ್ತೊಂದು ಆಕರ್ಷಣೆ ಆನಾ

  By Rajendra
  |

  'ಗೋವಿಂದಾಯ ನಮಃ' ಚಿತ್ರ ಈಗಾಗಲೆ ಭಾರಿ ಹವಾ ಎಬ್ಬಿಸಿದೆ. ಚಿತ್ರ ಬಿಡುಗಡೆಗಾಗಿ ಚಿತ್ರ ಪ್ರೇಮಿಗಳು ಕಾತುರದಿಂದ ನಿರೀಕ್ಷಿಸುವಂತಾಗಿದೆ. ಈ ಚಿತ್ರದ ಮತ್ತೊಂದು ಆಕರ್ಷಣೆ ಎಂದರೆ ಜಾರ್ಜಿಯಾದ ಸುಂದರಿ ಆನಾ ಬಾರ್ಬರಾ.

  ಕನ್ನಡ ಬಾರದ ಈಕೆ ತನ್ನ ಪಾತ್ರಕ್ಕಾಗಿ ಸ್ವತಃ ಡಬ್ಬಿಂಗ್ ಹೇಳಿದ್ದಾರೆ. ಜಾರ್ಜಿಯಾ ಭಾಷೆಯಲ್ಲಿ ಕನ್ನಡ ಡೈಲಾಗ್ಸ್ ಬರೆದುಕೊಂಡು ಡಬ್ಬಿಂಗ್ ಪಟಪಟ ಒಪ್ಪಿಸಿದ್ದಾರೆ. ಸುರೇಶ್ ಆರ್ಟ್ಸ್ ಲಾಂಛನದಲ್ಲಿ ಸುರೇಶ್ ನಿರ್ಮಿಸುತ್ತಿರುವ ಚಿತ್ರ ಇದು. 'ಗೋವಿಂದಾಯ ನಮಃ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

  ಸಾಫ್ಟ್‌ವೇರ್ ಇಂಜಿನಿಯರ್ ಆದ ಪವನ್ ಒಡೆಯರ್ ಕೆಲಸಕ್ಕೆ ರಜೆ ಹಾಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ನಾಯಕ ನಾಲ್ಕು ಮಂದಿ ಯುವತಿಯರ ಹಿಂದೆ ಬೀಳುತ್ತಾನೆ. ಅವರಲ್ಲಿ ಆನಾ ಬಾರ್ಬರಾ ಕೂಡ ಒಬ್ಬರು. ಉಳಿದ ಮೂವರು ಮಧುಲಿಕಾ, ರೇಖಾ ಹಾಗೂ ಪಾರುಲ್.

  ಚಿತ್ರದ ಪಾತ್ರವರ್ಗದಲ್ಲಿ ತಬಲಾ ನಾಣಿ, ಮುಖ್ಯಮಂತ್ರಿ ಚಂದ್ರು, ಕಿರ್ಲೋಸ್ಕರ್ ಸತ್ಯ, ಹರೀಶ್ ರಾಜ್, ವಿನಾಯಕ ಜೋಷಿ ಮುಂತಾದವರಿದ್ದಾರೆ. ಚಿತ್ರ ಮಾರ್ಚ್ 30ರಂದು ಬಿಡುಗಡೆಯಾಗುತ್ತಿದೆ. (ಒನ್‌ಇಂಡಿಯಾ ಕನ್ನಡ)

  English summary
  Comedy actro Komal Kumar lead Kannada movie Govindaya Namaha ready for release. The movie is all set to release on 30th March. Ana Barbara, a Georgia beauty dubbed for the film in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X