»   » ಜರ್ಮನ್ ಚಿತ್ರೋತ್ಸವಕ್ಕೆ ರಾಜ್ಯದ ಪ್ರಥಮ ಪ್ರಜೆ

ಜರ್ಮನ್ ಚಿತ್ರೋತ್ಸವಕ್ಕೆ ರಾಜ್ಯದ ಪ್ರಥಮ ಪ್ರಜೆ

Posted By:
Subscribe to Filmibeat Kannada
HR Bhardwaj
ಚಿತ್ರೋತ್ಸವಗಳು ಎರಡು ದೇಶಗಳ ನಡುವೆ ಸಾಂಸ್ಕೃತಿಕ ಸಂಬಂಧ ವೃದ್ಧಿಯಾಗಲು ವೇದಿಕೆಯಾಗುತ್ತದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚು-ಹೆಚ್ಚು ನಡೆಯಬೇಕು ಎಂದು ನಾಲ್ಕನೇ ಇಂಡೋ-ಜರ್ಮನ್ ಚಲನಚಿತ್ರೋತ್ಸವ ಉದ್ಘಾಟಿಸಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳಿದರು.

ಕಲಾತ್ಮಕ ಚಿತ್ರಗಳು ಎಲ್ಲಾ ಭಾಷೆಯಲ್ಲೂ ಬರುತ್ತಿದ್ದು, ಅದರಲ್ಲಿ ಕೆಲವು ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಬರುತ್ತದೆ. ಅಂತಹ ಚಿತ್ರಗಳ ಪ್ರದರ್ಶನ ಏರ್ಪಡಿಸಿರುವುದು ನಿಜಕ್ಕೂ ಸಂತೋಷದ ಸಂಗತಿ ಎಂದರು.

ತಮ್ಮ ಜರ್ಮನ್ ಪ್ರವಾಸದ ಅನುಭವಗಳ ಬಗ್ಗೆ ಹೇಳಿದ ಅವರು, ಅಲ್ಲಿನ, ಸಂಸ್ಕೃತಿ, ಅವರು ನಡೆಸುವ ಕಾರ್ಯಕ್ರಮಗಳು ಭಾರತೀಯ ಶೈಲಿಗೆ ಹೋಲಿಸಿದರೆ ತುಂಬಾ ವಿಭಿನ್ನ. ಅವರು ಜನತೆಯೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಇಂತಹ ಉತ್ತಮ ಚಿತ್ರೊತ್ಸವವನ್ನು ನಡೆಸಿಕೊಂಡು ಬರುತ್ತಿರುವ ಮಾಕ್ಸ್‌ಮುಲ್ಲರ್ ಭವನ,ಸುಚಿತ್ರ ಫಿಲ್ಮ್ ಸೊಸೈಟಿ ಹಾಗೂ ಏಷ್ಯನ್ ಫಿಲ್ಮ್ ಫೌಂಡೇಷನ್‌ಅವರ ಶ್ರಮವನ್ನ ಶ್ಲಾಘಿಘಿಸಿದರು. ಮುಂದೆಯೂ ಇದೆ ರೀತಿಯಲ್ಲಿ ಉತ್ತಮ ಚಿತ್ರಗಳು ಬೆಂಗಳೂರಲ್ಲಿ ಪ್ರದರ್ಶನಗೊಳ್ಳಲಿ ಎಂದು ಹಾರೈಸಿದರು.

ಶುಕ್ರವಾರ ಲಾವಣ್ಯ ಚಿತ್ರಮಂದಿರದಲ್ಲಿ ಇಂಡೋ ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಹೊಚ್ಚ ಹೊಸ ಚಲನಚಿತ್ರ 'ಕನಸೆಂಬೊ ಕುದುರೆಯನ್ನೇರಿ' ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada